ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಕೆ.ಅಮರನಾಥ ಶೆಟ್ಟಿ ವೇದಿಕೆಯಲ್ಲಿ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಡೆದ 20ನೇ ರಾಜ್ಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ಸ್ – 2025 ಸ್ಪರ್ಧೆಯಲ್ಲಿ ಗಂಗೊಳ್ಳಿ ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿಯ ವೈಷ್ಣವ್ ವಿ. ಖಾರ್ವಿ ಎ/ಕೆ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಈತ ಕಂಚುಗೋಡು ಭಗತ್ ನಗರ ವಾಸುದೇವ ಖಾರ್ವಿ ಮತ್ತು ತಾರಾ ವಿ. ಖಾರ್ವಿ ದಂಪತಿ ಪುತ್ರ.
ಈತನಿಗೆ ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕುಂದಾಪುರ ಸೆಂಟರ್‌ನ ಪ್ರಸನ್ನ, ಮಹಾಲಕ್ಷ್ಮೀ ಮತ್ತು ಶಿಕ್ಷಕಿ ಸುನೀತಾ ತರಬೇತಿ ನೀಡಿದ್ದರು.

