Kundapra.com ಕುಂದಾಪ್ರ ಡಾಟ್ ಕಾಂ

ಸಮಾಜದ ಅಂಕುಡೊಂಕು ಜನಸಾಮಾನ್ಯರಿಗೆ ತಲುಪಿಸುವ ಸಾಧನ ಕಾರ್ಟೂನು: ಡಾ. ಭಂಡಾರಿ

ಕುಂದಾಪುರ: ನಮ್ಮ ಸುತ್ತಮುತ್ತಲಿನ ಅಂಕುಡೊಂಕು ಜನಸಾಮಾನ್ಯರಿಗೆ ಮುಟ್ಟಿಸುವ ಮತ್ತು ಸಮಾಜವನ್ನು ಸದಾ ಎಚ್ಚರದಲ್ಲಿರಿಸುವ ಶಕ್ತಿ ಕಾರ್ಟೂನಿಗಿದೆ ಎಂದು ಉಡುಪಿ ಬಾಳಿಗಾ ಆಸ್ಪತ್ರೆ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಅಭಿಪ್ರಾಯಪಟ್ಟಿದ್ದಾರೆ.

ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಐಎಂಎ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್ ಕಲಾ ಮಂದಿರದಲ್ಲಿ ನಡೆದ ಕಾರ್ಟೂನ್ ಹಬ್ಬದಲ್ಲಿ ಡೂಡ್ಲಿಂಗ್ ವಿದ್ ಡಾಕ್ಟರ್’ ವಿಶಿಷ್ಟ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ನಸಾಮಾನ್ಯರಿಗಿಂತ ಹೆಚ್ಚು ಒತ್ತಡದಲ್ಲಿ ವೈದ್ಯರು ಕೆಲಸ ಮಾಡಬೇಕಿದ್ದು, ಅವರ ಒತ್ತಡ ನಿವಾರಕ ಶಕ್ತಿ ಕಾರ್ಟೂನಿಗಿದೆ. ನಿತ್ಯದ ಬದುಕು, ಹತ್ತಾರು ಸಮಸ್ಯೆಗಳ, ಸಮಾಜದ ಅಪಸೌವ್ಯಗಳ ಬಗ್ಗೆ ಬೆಳಕು ಚೆಲ್ಲುವ ನಿಷ್ಪಕ್ಷಪಾತ ಮಾಧ್ಯಮವಾಗಿ ಕಾರ್ಟೂನ್ ನಿಂತಿದೆ ಎಂದು ಹೇಳಿದರು.

ಯಾವುದೋ ಒಂದು ಸಂದರ್ಭದಲ್ಲಿ ಕಾರ್ಟೂನ್ ಲೋಕಕ್ಕೆ ಕಾಲಿಟ್ಟ ಸತೀಶ್ ಆಚಾರ‍್ಯ ಕಾರ್ಟೂನ್ ಲೋಕದ ಅದ್ಭುತ ಪ್ರತಿಭೆ ಎಂದು ಬಣ್ಣಿಸಿದ ಅವರು, ಕಾರ್ಟೂನ್‌ನಲ್ಲಿ ಪಕ್ಷಬೇಧ ಕಂಡುಬಾರದೆ ನಿಷ್ಪಕ್ಷಪಾತ ರಚನೆಯಲ್ಲಿ ಸತೀಶ್ ಸಿದ್ಧ ಹಸ್ತರು ಎಂದು ಬಣ್ಣಿಸಿದರು.

ಕುಂದಾಪುರ ಐಎಂಎ ಅಧ್ಯಕ್ಷ ಶ್ರೀ ದೇವಿ ನರ್ಸಿಂಗ್ ಹೋಮ್ ವೈದ್ಯಕೀಯ ನಿರ್ದೇಶಕಿ ಡಾ.ಭವಾನಿ ರಾವ್, ಕುಂದಾಪುರ ಕನ್ನಡ ವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ, ಕುಂದಾಪುರ ಐಎಂಎ ಕಾರ‍್ಯದರ್ಶಿ ಹಾಗೂ ಚಿನ್ಮಯ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀದೇವಿ ಕಟ್ಟೆ ಇದ್ದರು. ಪತ್ರಕರ್ತ ರಾಮಕೃಷ್ಣ ಹೇರ್ಳೆ ನಿರೂಪಿಸಿ, ಸ್ವಾಗತಿಸಿದರು. ಕಾರ್ಟೂನಿಷ್ಟ್ ಸತೀಶ್ ಆಚಾರ‍್ಯ ಮತ್ತು ಕೇಶವ ಸಸಿಹಿತ್ಲು ಹಾಗೂ ಲಾಯರ್ ರವಿ ಕುಮಾರ್ ಗಂಗೊಳ್ಳಿ ಅಥಿತಿಗಳನ್ನು ಗೌರವಿಸಿದರು.

 

Exit mobile version