Site icon Kundapra.com ಕುಂದಾಪ್ರ ಡಾಟ್ ಕಾಂ

ಅನ್‌ಲೈನ್ ಮೂಲಕ ಒಟಿಪಿ ಇಲ್ಲದೇ ರಾತ್ರೋರಾತ್ರಿ ಹಣ ಲಪಟಾಯಿಸಿದ ಸೈಬರ್ ವಂಚಕರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ರಾತೋರಾತ್ರಿ ವ್ಯಕ್ತಿಯೊಬ್ಬರ ಖಾತೆಯಿಂದ ಅನಾಮಿಕರು ಹಣ ಲಪಟಾಯಿಸಿದ ಘಟನೆ ನಡೆದಿದೆ.

ತೆಕ್ಕಟ್ಟೆಯ ಭಾರತ್ ಪೆಟ್ರೋಲ್ ಬಂಕ್ ಸಮೀಪದ ರಮೇಶ್ ಮರಕಾಲ ಅವರ ಖಾತೆಯಿಂದ ಮಧ್ಯರಾತ್ರಿ 12.23ರ ಸುಮಾರಿಗೆ ಐಎಂಪಿಎಸ್ ಮೂಲಕ ಯೂನಿಯನ್ ಬ್ಯಾಂಕ್ ಖಾತೆಯಿಂದ 90 ಸಾವಿರ ರೂ. ಹಣ ಡ್ರಾ ಆಗಿದೆ.

ಯಾವುದೇ ಒಟಿಪಿ ವಿನಂತಿ ಇಲ್ಲ, ಯಾವುದೇ ಅನಧಿಕೃತ ಆ್ಯಪ್ ಡೌನ್ ಲೋಡ್ ಮಾಡಿಲ್ಲ. ನಿದ್ದೆಯಲ್ಲಿದ್ದ ವೇಳೆ, ಮೊಬೈಲ್ ಉಪಯೋಗ ಕೂಡ ಮಾಡದೇ ಇದ್ದ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣ ಡ್ರಾ ಆಗಿದ್ದು ಅವರು ಸೈಬರ್ ವಂಚನೆಯ ದೂರು ದಾಖಲಿಸಿದ್ದಾರೆ. ಕದ್ದ ಹಣವು  ಕೋಲ್ಕತ್ತಾದ ಬ್ಯಾಂಕ್‌ಗೆ ಖಾತೆಗೆ ಜಮೆಯಾಗಿದೆ.

Exit mobile version