ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಯಾವುದೇ ಹೊಸ ಆ್ಯಪ್‌ಗಳನ್ನು ನಿರ್ವಹಿಸುವಾಗ ಸಾರ್ವಜನಿಕರು ಮುಖ್ಯವಾಗಿ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು. ಅವುಗಳ ಅಧಿಕೃತೆಯ ಬಗೆಗೆ ಜಾಗರೂಕರಾಗಿರಿ. ನಿಮ್ಮ ವಯಕ್ತಿಕ ವಿವರಗಳನ್ನು ದಾಖಲಿಸಿದಾಗ ಕೆಲವೊಮ್ಮೆ ಅವು ಸೈಬರ್ ವಂಚಕರ ವಶವಾಗಬಹುದು, ಅದರಿಂದ ನಿಮ್ಮ ಚಾರಿತ್ರ್ಯಕ್ಕೆ ಧಕ್ಕೆ ಬರಬಹುದು. ಓಟಿಪಿಯನ್ನು ಯಾವುದೆ ಕಾರಣಕ್ಕೆ ಕೊಟ್ಟು ಮೋಸಹೋಗದೆ ಮುನ್ನೆಚ್ಚರಿಕೆ ವಹಿಸಿ ಎಂದು ಗಂಗೊಳ್ಳಿ ಪೋಲಿಸ್ ಠಾಣೆಯ ಠಾಣಾಧಿಕಾರಿ ಸುನಿಲ್ ಹೇಳಿದರು.
ಅವರು ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಜಯೀಂದ್ರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಉಪನ್ಯಾಸಕರಾದ ಎನ್.ಸಿ ವೆಂಕಟೇಶ್ ಮೂರ್ತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸುದೇಶ್, ಶಶಾಂಕ್ ಉಪಸ್ಥಿತರಿದ್ದರು.
ಹಿಂದಿ ಉಪನ್ಯಾಸಕ ನಾರಾಯಣ್ ಇ. ನಾಯ್ಕ್ ಪ್ರಸ್ಥಾವಿಸಿ ಸ್ವಾಗತಿಸಿದರು ವಿದ್ಯಾರ್ಥಿನಿ ದೀಪಾಲಿ ಕಾರ್ಯಕ್ರಮ ನಿರ್ವಹಿಸಿದರು. ದೀಕ್ಷಾ ವಂದಿಸಿದರು.

