Site icon Kundapra.com ಕುಂದಾಪ್ರ ಡಾಟ್ ಕಾಂ

ಆರ್. ಎನ್. ಶೆಟ್ಟಿ ಪ.ಪೂ ಕಾಲೇಜಿನಲ್ಲಿ ‘ಸೈಬರ್ ಕ್ರೈಮ್ ತಡೆ’ ಬಗ್ಗೆ ಉಪನ್ಯಾಸ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:
ಪ್ಲೇಸ್ಟೋರ್ ನಿಂದ ಯಾವುದೇ ಆ್ಯಪ್ ಡೌನ್ಲೋಡ್ ಮಾಡುವಾಗ  ವೈಯುಕ್ತಿಕ ಮಾಹಿತಿ ಮತ್ತು ಪಾಸ್ ವರ್ಡ್ ನೀಡುವಲ್ಲಿ ನಾವು ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣಗಳ ಸ್ನೇಹ ಸಂಪರ್ಕಗಳ ಬಗ್ಗೆ ಎಚ್ಚರವಹಿಸಿ ಸೈಬರ್ ಮೋಸಜಾಲಕ್ಕೆ ಬಲಿಪಶುಗಳಾಗದಂತೆ  ನೋಡಿಕೊಳ್ಳಬೇಕು ಎಂದು ಕುಂದಾಪುರ ಟೌನ್ ಪೊಲೀಸ್ ಸ್ಟೇಶನ್ ಠಾಣಾಧಿಕಾರಿ ನಂಜಾ ನಾಯ್ಕ ಕರೆ ನೀಡಿದರು.

ಅವರು ಇಲ್ಲಿನ ಆರ್.ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ‘ ಸೈಬರ್ ಕ್ರೈಮ್ ತಡೆಗಟ್ಟುವಿಕೆ ವಿಷಯಾಧಾರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನವೀನ ಕುಮಾರ ಶೆಟ್ಟಿ ಅವರು ಉಪಸ್ಥಿತರಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಅವರು ಕಾರ್ಯಕ್ರಮ ನಿರ್ವಹಿಸಿದರು.

Exit mobile version