ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮದ ದೀಪಿಕಾ ಶ್ಯಾನುಭಾಗ್ ಯು. ಅವರು ಮಂಡಿಸಿದ ’ಇನ್ವೆಸ್ಟಿಗೇಶನ್ ಆಫ್ ಥರ್ಮೋಎಲೆಕ್ಟ್ರಿಕ್ ಪರ್ಫೋರ್ಮೆನ್ಸ್ ಆಫ್ ರೇರ್ ಅರ್ತ್ ಆಂಡ್ ಚಾಲ್ಕೋಜಿನೈಡ್ ಬೇಸ್ಡ್ ಸಿಸ್ಟಮ್ಸ್’ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಪಿಎಚ್‌ಡಿ ಪದವಿ ನೀಡಿದ್ದಾರೆ.
ಮಣಿಪಾಲ ಇನ್ಸಿಟ್ಯೂಟ್ ಆಫ್ ಟೆಕ್ನಾಲೋಜಿ ಮಾಹೆ ಮಣಿಪಾಲದ ಭೌತಶಾಸ್ತ್ರ ವಿಭಾಗದ ಸೀನಿಯರ್ ಪ್ರೊಫೆಸರ್ ಡಾ. ಅಶೋಕ್ ರಾವ್ ಅವರಿಗೆ ಮಾರ್ಗದರ್ಶನ ನೀಡಿದ್ದರು.
ಅವರು ಗಂಗೊಳ್ಳಿಯ ಯು. ಪುಂಡಲೀಕ ಶ್ಯಾನುಭಾಗ್ ಮತ್ತು ಉಷಾ ಪಿ. ಶ್ಯಾನುಭಾಗ್ ದಂಪತಿ ಪುತ್ರಿ.

