ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಾಲಾ ಮಕ್ಕಳಿಗೆ ಕನ್ನಡ ರಾಜ್ಯೋತ್ಸವದ ಅರಿವು ಮೂಡಿಸಬೇಕು ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಅವರು 70ನೇಯ ಕನ್ನಡ ರಾಜ್ಯೋತ್ಸವದ ದಿನಾಚರಣೆಯ ಕುಂದಾಪುದರ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತ ಕುಂದಾಪುರ ಇವರಿಂದ ಆಯೋಜಿಸಲಾದ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವವನ್ನು ಸ್ಥಳೀಯವಾಗಿರುವ ಎಲ್ಲ ಶಾಲಾ ಮಕ್ಕಳು ಮುಂದಿನ ದಿವಸ ಭಾಗಿಯಾಗುವಂತೆ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಸೂಚಿಸಿ ಪ್ರತಿ ವರ್ಷವೂ ಬೇರೆ ಬೇರೆ ಶಾಲೆಯಲ್ಲಿ ನಾವೆಲ್ಲ ಆಚರಿಸುವಂತಹ ವಾಲ್ಮೀಕಿ ಜಯಂತಿ ಇರಬಹುದು ಹೀಗೆ ಬೇರೆ ಬೇರೆ ದಿನಾಚರಣೆಯನ್ನು ಆಚರಿಸುದರೊಂದಿಗೆ ಮಕ್ಕಳಿಗೆ ಇದರ ಮಹತ್ವವನ್ನು ತಿಳಿಸಿ, ದೇಶ ಪ್ರೇಮದ ಜೊತೆಗೆ ಮತ್ತು ನಾಡಿನ ಬಗ್ಗೆ ಅರಿವು ಮೂಡಿಸುವಂತಹ ಆಗಬೇಕು ಎಂದರು.

ರಾಜ್ಯೋತ್ಸವದ ಸಂದೇಶ ಹಾಗೂ ಧ್ವಜಾರೋಹಣವನ್ನು ರಶ್ಮಿ ಎಸ್.ಆರ್.ಕ.ಆ.ಸೇ. ಸಹಾಯಕ ಆಯುಕ್ತರು ಕುಂದಾಪುರ ಉಪ ವಿಭಾಗ ನೆರವೇರಿಸಿದರು.
ಘನ ಉಪಸ್ಥಿತಿಯಲ್ಲಿ ಕುಂದಾಪುರ ಪುರಸಭೆಅಧ್ಯಕ್ಷ ಮೋಹನ್ ದಾಸ್ ಶೆಣೈ, ಕುಂದಾಪುರ ಸಮಿತಿ ಯೋಜನಾ ಪ್ರಾಧಿಕಾರಅಧ್ಯಕ್ಷ ವಿನೋದ್ ಕ್ರಾಸ್ತಾ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿರುವ ಎಚ್. ಡಿ. ಕುಲಕರ್ಣಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕೆ.ಜಿ., ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಶೋಭಾ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯ ಅಧಿಕಾರಿ ಆನಂದ ಜಿ., ಕುಂದಾಪುರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ಹಾಗೂ ತಹಶೀಲ್ದಾರರಾಗಿರುವ ಪ್ರದೀಪ್ ಕುರುಡೇಕರ್ ಎಸ್., ಮತ್ತು ಜನಪ್ರತಿನಿಧಿಗಳು ಊರಿನ ಗಣ್ಯರು, ವಿದ್ಯಾರ್ಥಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.