ಕುಂದಾಪುರ: ಕಾರ್ಟೂನಿನಲ್ಲಿ ಸಮಾಜಕ್ಕೊಂದು ಮಸೇಜ್ ಇರಬೇಕು. ಮಹಿಳೆಯರಿಗೆ ಕಾರ್ಟೂನ್ ರಂಗದಲ್ಲಿ ಪ್ರೋತ್ಸಾಹ ನೀಡಿದರೆ ಮಾಯಾ ಕಾಮತ್ ಅವರಂತಾ ಪ್ರಸಿದ್ಧ ವ್ಯಂಗ್ಯಚಿತ್ರಗಾರರ ಬರಲು ಸಾಧ್ಯ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ಹೇಳಿದ್ದಾರೆ.
ಕಾರ್ಟೂನ್ ಕುಂದಾಪುರ ಆಶ್ರಯದಲ್ಲಿ ಮಾಯಾ ಕಾಮತ್ ಕುಟುಂಬ ಸಹಭಾಗಿತ್ವದಲ್ಲಿ ಕುಂದಾಪುರ ಜೂನಿಯರ್ ಕಾಲೇಜ್‌ನಲ್ಲಿ ನಡೆದ ಮಾಯಾ ಕಾಮತ್ ಕಾರ್ಟೂನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಹಿಳೆಯರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ, ಸ್ಪರ್ಧಾಳುಗಳು ಕಡಿಮೆಯಿದ್ದರೂ, ಹನಿ ಹನಿ ಸೇರಿ ಹಳ್ಳವಾಗುವ ಹಾಗೆ ಮುಂದೊಂದು ದಿನ ಮಹಿಳಾ ಕಾರ್ಟೂನಿಷ್ಟ್‌ಗಳು ರಂಗ ಪ್ರವೇಶ ಮಾಡಲಿದ್ದಾರೆ ಎಂದ ಅವರು, ಕಾರ್ಟೂನ್‌ಗಳು ನೋಡಿ ಅರ್ಥ ಮಾಡಿಕೊಳ್ಳುವ ಹಾಗಿರಬೇಕು ಎಂದರು.
ಗುರುಕುಲ ಪಬ್ಲಿಕ್ ಸ್ಕೂಲ್ ಜಂಟಿ ಆಡಳಿತ ನಿರ್ದೇಶಕ ಅನುಪಮಾ ಬಾಂಡ್ಯಾ ಮಾತನಾಡಿ, ಕಾರ್ಟೂನಿಗೆ ನೋವು ದುಃಖ್ಖ ಮರೆಸುವ ಶಕ್ತಿಯಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಾರ್ಟೂನ್ ಪೂರಕ. ನರಂತರ ಪ್ರಯತ್ನದಿಂದ ಸಾಧನೆ ಸಾಧ್ಯ ಎಂದರು. ಚೈತನ್ಯ ವಿಶೇಷ ಮಕ್ಕಳ ಶಾಲೆ ಕಾರ‍್ಯದರ್ಶಿ ಸುಜಾತಾ ನಕ್ಕತ್ತಾಯ ಇದ್ದರು. ಉಪನ್ಯಾಸಕಿ ಜಯಶೀಲ ಪೈ ಸ್ವಾಗತಿಸಿ, ನಿರೂಪಿಸಿದರು. ಕಾರ್ಟೂನಿಷ್ಟ್ ರಾಮಕೃಷ್ಣ ಹೇರ್ಳೆ ಸಂದೇಶ ವಾಚನ ಮಾಡಿದರು. ಕಾರ್ಟೂನಿಷ್ಟ್ ಸತೀಶ್ ಆಚಾರ್ಯ ಮತ್ತು ಕೇಶವ ಸಸಿಹಿತ್ಲು ಅಥಿತಿಗಳ ಗೌರವಿಸಿದರು.