Kundapra.com ಕುಂದಾಪ್ರ ಡಾಟ್ ಕಾಂ

ಕಾರ್ಟೂನು ಹಬ್ಬ ಸಮಾರೋಪ. ವಿಜೇತರಿಗೆ ಬಹುಮಾನ ವಿತರಣೆ

ಕುಂದಾಪುರ: ಕಾರ್ಟೂನು ಕೇವಲ ಒಂದು ಕಲೆಯಾಗಿ ಮಾತ್ರ ಉಳಿಯದೇ ಸಮಾಜವನ್ನು ರಚನಾತ್ಮಕವಾಗಿ ಕಟ್ಟುವ ಮಾಧ್ಯಮವಾಗಿ ಬೆಳೆದುನಿಂತಿದೆ. ವ್ಯಂಗ್ಯಚಿತ್ರಕಾರರು ಚಿತ್ರ ಕಲಾವಿದರಾಗಿ ಮಾತ್ರವೇ ಉಳಿಯದೇ ಸಮಾಜವನ್ನು ಭಿನ್ನ ದೃಷ್ಠಿಯಿಂದ ಗಮನಿಸುವ ಕಲಾಕಾರರಾಗಿ ಕಾಣಿಸಿಕೊಳ್ಳುತ್ತಾರೆ ಎಂದು ರೋಟರಿ ಇಂಟರ್‌ನ್ಯಾಷನಲ್ 2018-19ರ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ಹೇಳಿದರು.

ಭಾನುವಾರು ಇಲ್ಲಿನ ಕಲಾಮಂದಿರದಲ್ಲಿ ಕಾರ್ಟೂನು ಕುಂದಾಪುರ ಆಯೋಜಿಸಿದ ’ಕಾರ್ಟೂನು ಹಬ್ಬ’ ಸಮಾರೋಪದಲ್ಲಿ ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಚಿನ್ಮಯ ಆಸ್ವತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಉಮೇಶ್ ಪುತ್ರನ್, ಹಟ್ಟಿಯಂಗಡಿ ಶ್ರೀಸಿದ್ಧಿವಿನಾಯಕ ಶಾಲೆ ಪ್ರಾಂಶುಪಾಲ ಶರಣ್‌ಕುಮಾರ್, ಹೋಟೆಲ್ ಪಾರಿಜಾತದ ಆಡಳಿತ ನಿರ್ದೇಶಕ ಗಣೇಶ್ ಭಟ್, ಹಿರಿಯ ಪತ್ರಕರ್ತ ಶ್ರೀಪತಿ ಹೆಗಡೆ ಹಕ್ಲಾಡಿ, ರೋಟರಿ ಕುಂದಾಪುರ ಮಾಜಿ ಅಧ್ಯಕ್ಷ ಮನೋಜ್ ನಾಯರ್ ಉಪಸ್ಥಿತರಿದ್ದರು. ಕಾರ್ಟೂನಿಷ್ಠ ಸತೀಶ್ ಆಚಾರ‍್ಯ ಸ್ವಾಗತಿಸಿದರು. ಶಿಕ್ಷಕಿ ಜಯಶೀಲ ಪೈ ನಿರೂಪಿಸಿದರು. ಕೇಶವ ಸಸಿಹಿತ್ಲು, ರವಿಕುಮಾರ್ ಗಂಗೊಳ್ಳಿ ಸಹಕರಿಸಿದರು.

_MG_6306

Exit mobile version