Site icon Kundapra.com ಕುಂದಾಪ್ರ ಡಾಟ್ ಕಾಂ

ಮೂಡ್ಲಕಟ್ಟೆ: ರಾಜ್ಯಮಟ್ಟದ ಅಂತರ್ ಕಾಲೇಜು‌ ಸ್ಪರ್ಧೆ ನವೋನ್ಮೇಶ ಉದ್ಘಾಟನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಐಎಮ್‌ಜೆ ಇನ್ಸ್ಟಿಟ್ಯೂಶನ್ಸ್ ಮೂಡ್ಲಕಟ್ಟೆ ಇಲ್ಲಿ ರಾಜ್ಯಮಟ್ಟದ ಅಂತರ್ ಕಾಲೇಜು‌ ಸ್ಪರ್ಧೆ ನವೋನ್ಮೇಶ 2025 ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.  

ಉದ್ಘಾಟಕರಾಗಿ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಖ್ಯಾತ ಚಲನಚಿತ್ರ ನಟ ದೀಪಕ್ ರೈ ಪಾಣಾಜೆ ಆಗಮಿಸಿದ್ದರು.

ಉದ್ಘಾಟನಾ ಭಾಷಣ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ ಅವರು ಮಕ್ಕಳು ವಿದ್ಯೆ ಜೊತೆ ಉತ್ತಮ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತ ಸಂಸ್ಥೆಯ ಸ್ಥಾಪಕರಾದ ದಿ.ಐ ಎಮ್. ಜಯರಾಮ್ ಶೆಟ್ಟಿ ಹಾಗೂ  ಬೆಳವಣಿಗೆಗೆ ಕಾರಣೀಕರ್ತರಾದ ಸಿದ್ಧಾರ್ಥ್ ಜೆ. ಶೆಟ್ಟಿ ಅವರನ್ನು ಶ್ಲಾಘಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಕರಾವಳಿಯ ಖ್ಯಾತ ನಟ ದೀಪಕ್ ರೈ ಪಾಣಾಜೆ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಂಸ್ಥೆಯ ಅಕಾಡಮಿಕ್ ಡೈರೆಕ್ಟರ್ ಡಾ. ಎಸ್.ಎನ್. ಭಟ್ ಅಧ್ಯಕ್ಷೀಯ ಭಾಷಣದಲ್ಲಿ ನವೋನ್ಮೇಶ ಪದದ ಅರ್ಥವನ್ನು ವಿವರಿಸಿ ಪ್ರತೀಭಾನ್ವೇಶಣೆಗೆ ಪೂರಕವಾದದ್ದು ಎಂದು ಹೇಳಿ ಕಾರ್ಯಕ್ರಮ ಆಯೋಜಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಐಎಮ್‌ಜೆ ಐ ಎಸ್ ಸಿ ಪ್ರಾಂಶುಪಾಲೆ ಡಾ. ಪ್ರತಿಭಾ ಪಾಟೀಲ್ ನವೋನ್ಮೇಶ್ 2025 ಸ್ಪರ್ದೆಯ ರೂಪುರೇಷೆಗಳನ್ನು ವಿವರಿಸಿದರು.  

ಅಲೈಡ್ ಹೆಲ್ಥ್ ಸೈನ್ಸ್ ಡೀನ್ ಡಾ. ಪದ್ಮಚರಣ್ ಹಾಗೂ  ಅಲೈಡ್ ಸೈನ್ಸ್ ಪ್ರಾಂಶುಪಾಲೆ ಪ್ರೊಫೆಸರ್ ಹೇಮಲತ, ಎಲ್ಲಾ ಕಾಲೇಜಿನ ವಿದ್ಯಾರ್ಥಿ ಮುಖಂಡರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೊಫೆಸರ್ ಸೂಕ್ಷ್ಮ ಅಡಿಗ ಹಾಗೂ ಕಾಮರ್ಸ್ ವಿಭಾಗದ ಮುಖ್ಯಸ್ಥೆ ಪ್ರೊಫೆಸರ್ ಅರ್ಚನ ಉಪಧ್ಯಾಯ ಅತಿಥಿ ಪರಿಚಯ ಮಾಡಿ, ಎಮ್ ಐ ಟಿ ಕೆ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಸ್ವಾಗತಿಸಿ, ಎಮ್ ಬಿ ಎ ವಿದ್ಯಾರ್ಥಿನಿ ಶಾಂಭವಿ ಕಾರ್ಯಕ್ರಮ ನಿರೂಪಿಸಿ, ಏಮ್ ಸಿ ಎನ್ ಪ್ರಾಂಶುಪಾಲೆ ಪ್ರೊಫೆಸರ್ ಜೆನಿಫರ್ ಫ್ರೀಡಾ ಮೆನೇಜಸ್ ವಂದಿಸಿದರು.

ಡಾಟಾ ಸೈನ್ಸ್ ವಿಭಾಗದ ಮುಖ್ಯಸ್ಥರು ಪ್ರೊಫೆಸರ್ ಕಾರ್ತಿಕೇಯನ್ ಐಎಮ್‌ಜೆ ಸಮೂಹ ಸಂಸ್ಥೆಯ ಪರಿಚಯ ನೀಡಿದರು. ವಿವಿಧ ಪಿಯು ಕಾಲೇಜಿನ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

Exit mobile version