ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ವೀರೇಶ್ವರ ಮತ್ತು ಉಮಾಮಹೇಶ್ವರ ದೇವಸ್ಥಾನ ಗಂಗೊಳ್ಳಿ ಇದರ ಶಿವರಾತ್ರಿ ಸೇವಾ ಸಮಿತಿಯ 7ನೇ ವರ್ಷದ ಹಾಗೂ ಮಹಾಶಿವರಾತ್ರಿ ಮಹೋತ್ಸವದ ಪ್ರಯುಕ್ತ 108 ದಿನಗಳ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮ ದೀಪ ಸ್ಥಾಪನೆಯೊಂದಿಗೆ ಶನಿವಾರ ಪ್ರಾರಂಭವಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಜಿ. ರವೀಶ್ ಭಟ್ ಅವರು ಧಾರ್ಮಿಕ ವಿಧಿವಿಧಾನ ನೆರವೇರಿಸಿ ಅಖಂಡ ಭಜನಾ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಉಮೇಶ್ ಎಲ್. ಮೇಸ್ತ ಗುಜ್ಜಾಡಿ, ಜಿ.ಡಿ.ಕೇಶವ ಶೇರುಗಾರ್, ಕಾರ್ತಿಕ್ ಶೇಟ್, ಮತ್ಸ್ಯೋದ್ಯಮಿ ಸುರೇಶ ಖಾರ್ವಿ ಕಂಚುಗೋಡು, ಪ್ರಮೋದ ಗಾಣಿಗ, ದುರ್ಗರಾಜ್ ಪೂಜಾರಿ, ತುಂಗಾ ರಾಮ ಪೂಜಾರಿ, ಜಯಕರ ಪೂಜಾರಿ, ನಾಗೇಶ ಖಾರ್ವಿ, ಸುಂದರ ಜಿ., ಸಮಿತಿಯ ಅಧ್ಯಕ್ಷ ನಾಗರಾಜ ಖಾರ್ವಿ, ಸಮಿತಿಯ ಗೌರವಾಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿಗಳ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.
ಫೆ.16ರಂದು ದೀಪ ವಿಸರ್ಜನೆಯೊಂದಿಗೆ 108 ದಿನಗಳ ಅಖಂಡ ಭಜನಾ ಮಹೋತ್ಸವ ಮಂಗಲಾಚರಣೆ ನಡೆಯಲಿದೆ. ಫೆ.15ರಂದು ಮಹಾಶಿವರಾತ್ರಿಯಂದು ನಗರ ಭಜನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.