ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಮರವಂತೆಯ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಬೈಂದೂರು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶೀ ಮೂಕಾಂಬಿಕಾ ಪ್ರೌಢಶಾಲೆ ಮಾವಿನಕಟ್ಟೆಯ ಹತ್ತು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕೆ ಆಯ್ಕೆಯಾಗಿದ್ದಾರೆ.

ಶೀವತ್ಸ ಡಿಸ್ಕಸ್ ತ್ರೊನಲ್ಲಿ ಪ್ರಥಮ, ಗುಂಡು ಎಸೆತ ದ್ವಿತೀಯ, ಸಾತ್ವಿಕ ಎಂಬತ್ತು ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ, ಶಿವರಾಜ ಮೂರು ಸಾವಿರ ಮೀಟರ್ ಓಟದಲ್ಲಿ ಪ್ರಥಮ, ಶಾಹಿದ್ ನೂರು ಮೀಟರ್ ಓಟದಲ್ಲಿ ದ್ವಿತೀಯ, ಬಿಲಾಲ್ ಹ್ಯಾಮರ್ ಎಸೆತದಲ್ಲಿ ಪ್ರಥಮ, ಸಾಕೇತ ಐದು ಕಿಲೋಮೀಟರ್ ನಡಿಗೆ ಪ್ರಥಮ, ಆರ್ಚನಾ ಮೂರು ಸಾವಿರ ಮೀಟರ್ ಓಟ ಪ್ರಥಮ, ಮೇಘನಾ ನಾಲ್ಕು ನೂರು ಮೀಟರ್ ರಿಲೇ ಪ್ರಥಮ, ರಿತ್ವಿ ನಾಲ್ಕು ನೂರು ಮೀಟರ್ ರಿಲೇ ಪ್ರಥಮ, ದೀಪಿಕಾ ನಾಲ್ಕು ನೂರು ಮೀಟರ್ ರಿಲೇ ಪ್ರಥಮ, ಅನ್ವಿತಾ ನಾಲ್ಕು ನೂರು ಮೀಟರ್ ರಿಲೇ ತ್ರತೀಯ, ಶಿವರಾಜ ನಾಲ್ಕು ನೂರು ಮೀಟರ್ ರಿಲೇ ತೃತೀಯ, ಸುಜನ ನಾಲ್ಕು ನೂರು ಮೀಟರ್ ರಿಲೇ ತೃತೀಯ, ಆರಾನ್ ನಾಲ್ಕು ನೂರು ಮೀಟರ್ ರಿಲೇ ತೃತೀಯ.