ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿದ್ದಿವಿನಾಯಕ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಕೋಣಿ ಎಂಬಲ್ಲಿ ನಡೆದಿದೆ.
ಸತೀಶ್ ಪೂಜಾರಿ ಎಂಬವರ ಪುತ್ರ, ಮನೀಷ (14) ಮೃತಪಟ್ಟ ಬಾಲಕ.
ನ.6ರಂದು ಸಂಜೆ ಶಾಲೆಯಿಂದ ಮನೆಗೆ ಬಂದ ಮನೀಷ ಬಳಿಕ ನಾಪತ್ತೆಯಾಗಿದ್ದ. ಮನೆ ಸಮೀಪದ ಬಾವಿಯಲ್ಲಿ ಶಬ್ದ ಕೇಳಿಸಿದ್ದು, ನೋಡಿದಾಗ ಮನೀಷ ಕೆರೆಗೆ ಬಿದ್ದಿರುವುದು ತಿಳಿದು ಬಂದಿದೆ. ತಕ್ಷಣ ಅಗ್ನಿಶಾಮಕದಳದವರು ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅದಾಗಲೇ ಬಾಲಕ ಮೃತಪಟ್ಟಿದ್ದ.
ಬಾವಿ ದಂಡೆ ಮೇಲೆ ಕುಳಿತಿದ್ದ ಮನೀಷ ಆಕಸ್ಮಿಕವಾಗಿ ಬಿದ್ದನೇ ಅಥವಾ ಆತ್ಮಹತ್ಯೆಯೋ ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

