ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮೈಸೂರು ಹಾಗೂ ಆರ್‌ವಿ ಪದವಿಪೂರ್ವ ಕಾಲೇಜು, ಮೈಸೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು 07 ಚಿನ್ನ, 03 ಬೆಳ್ಳಿ ಮತ್ತು 01 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕಗಳನ್ನು ಪಡೆದುಕೊಂಡಿತು. ಜೊತೆಯಲ್ಲಿ ರಾಷ್ಟ್ರ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ 08 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ:
ನಾಗಿಣಿ – 800ಮೀ (ಪ್ರಥಮ), 1500ಮೀ (ಪ್ರಥಮ), ಗುಡ್ಡಗಾಡು ಓಟ (ಪ್ರಥಮ), 4*400ಮೀ ರಿಲೇ (ಪ್ರಥಮ), ಚರಿಷ್ಮಾ – 3000ಮೀ (ಪ್ರಥಮ), 1500ಮೀ (ದ್ವಿತೀಯ), ಗುಡ್ಡಗಾಡು ಓಟ (ದ್ವಿತೀಯ), 4*400ಮೀ ರಿಲೇ (ಪ್ರಥಮ), ಗೋಪಿಕಾ ಜಿ – 100ಮೀ (ಪ್ರಥಮ), 4*100ಮೀ ರಿಲೇ (ಪ್ರಥಮ), ಮಾನ್ವಿ ವಿ ಶೆಟ್ಟಿ – 4*100ಮೀ ರಿಲೇ (ಪ್ರಥಮ), ಭಾನವಿ – 4*100ಮೀ ರಿಲೇ (ಪ್ರಥಮ), ವೈಷ್ಣವಿ – 4*100ಮೀ ರಿಲೇ (ಪ್ರಥಮ), ನಿರ್ಮಲಾ – 400ಮೀ ಹರ್ಡಲ್ಸ್ (ದ್ವಿತೀಯ), 4*400ಮೀ ರಿಲೇ (ಪ್ರಥಮ), ಜಾನಕಿ ಜಿ ಸಿ – 4*400ಮೀ ರಿಲೇ (ಪ್ರಥಮ), ಗಾನವಿ – 800ಮೀ (ತೃತೀಯ) ಸ್ಥಾನ ಪಡೆದಿದ್ದಾರೆ.
ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ನಾಗಿಣಿ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

