ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನಾ ಘಟಕಗಳ (1 ಮತ್ತು 2) ಆಶ್ರಯದಲ್ಲಿ ‘ಒಂದು ದಿನದ ವಿಶೇಷ ಶಿಬಿರ’ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಕುಂಭಾಶಿ ಅಲ್ಲಿ ನಡೆಯಿತು.
ಶ್ರೀ ವಿನಾಯಕ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಮಣ ಉಪಾಧ್ಯಾಯ ಶಿಬಿರಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪುರೋಹಿತ ವೃಂದದವರು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ ಹಾಗೂ ಪೂಜಾ ಕುಂದರ್, ಪ್ರಾಧ್ಯಾಪಕರಾದ ಸತೀಶ್ ಶೆಟ್ಟಿ, ಪ್ರವೀಣ್ ಮೊಗವೀರ, ಹರೀಶ್ ಬಿ., ಸುಧೀರ್ ಕುಮಾರ್, ಬೋಧಕೇತರ ಸಿಬ್ಬಂದಿಗಳಾದ ರಕ್ಷಿತ್, ಶರತ್ ಕೊಠಾರಿ, ನಿತೇಶ್, ದೇವಸ್ಥಾನದ ಮ್ಯಾನೇಜರ್ ನಿತೇಶ್ ಕಾರಂತ್, ಗಣೇಶ್ ಅಂಪಾರು ಮತ್ತು ಪ್ರಮೋದ್ ಉಪಾಧ್ಯಾಯ ಆನೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
ಆನೆಗುಡ್ಡೆ ದೇವಸ್ಥಾನ ಪರಿಸರವನ್ನು ಸ್ವಚ್ಛಗೊಳಿಸುವ ಈ ಶಿಬಿರದಲ್ಲಿ ಕಾಲೇಜಿನ 70 ಸ್ವಯಂಸೇವಕರು ಪಾಲ್ಗೊಂಡರು.

