Site icon Kundapra.com ಕುಂದಾಪ್ರ ಡಾಟ್ ಕಾಂ

ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ರಿಶಾಂತ್ ಖಾರ್ವಿ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 14 ವರ್ಷದ ಒಳಗಿನ ವಯೋಮಿತಿಯ ವಿಭಾಗದಲ್ಲಿ ರಿಶಾಂತ್ ಖಾರ್ವಿ ಆಯ್ಕೆಯಾಗಿದ್ದಾರೆ.

ಅವರು ಮೂಲತಃ ಕುಂದಾಪುರದವರಾದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಖ್ಯಾತ ಈಜು ತರಬೇತುದಾರ ದಯಾನಂದ ಖಾರ್ವಿ ಮತ್ತು ಚಿತ್ರಲೇಖಾ ಅವರ ಪುತ್ರ. ಬಾಲ್ಯದಿಂದಲೇ ಈಜಿನಲ್ಲಿ ಆಸಕ್ತಿ ಹೊಂದಿದ್ದ ರಿಶಾಂತ್ ತನ್ನ ತಂದೆಯ ಈಜಿನ ಶೈಲಿಯಿಂದ ಪ್ರೇರಿತನಾಗಿ ತಂದೆಯನ್ನೇ ಗುರುವಾಗಿ ಸ್ವೀಕರಿಸಿ, ಈಜು ಕಲಿತ ಕಠಿಣ ಪರಿಶ್ರಮಿ ಬೆಂಗಳೂರಿನ ಆಸು ಪಾಸಿನಲ್ಲಿ ನೆಡೆದ ಬಹತೇಕ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು, ಪ್ರಸಿದ್ಧಿಯನ್ನು ಪಡೆದು ಉತ್ತಮ ಈಜು ಪಟುವೆಂದು ಖ್ಯಾತಿ ಪಡೆದಿರುತ್ತಾರೆ.

14 ರಿಂದ 17 ವರ್ಷದ ವಯೋಮಾನದ ವಿಭಾಗದಲ್ಲಿ ಇತ್ತೀಚಿಗೆ ಮೈಸೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಈಜು ಮತ್ತು ಡೈವಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ ರಿಶಾಂತ್ 200ಮೀ ವೈಯುಕ್ತಿಕ ಮಿಡ್ಲೆ ಮತ್ತು 4*400 ರಿಲೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 200 ಮೀ ಬಟರ್ ಪ್ಲೈ ಮತ್ತು 400ಮೀ ಪ್ರೀ ಸ್ಟೈಲ್‌ನಲ್ಲಿ ಬೆಳ್ಳಿ ಪದಕವನ್ನು ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿರುತ್ತಾರೆ.

Exit mobile version