Kundapra.com ಕುಂದಾಪ್ರ ಡಾಟ್ ಕಾಂ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ: ಸಂಭ್ರಮದ ಬ್ರಹ್ಮರಥೋತ್ಸವ

ಕುಂದಾಪ್ರ ಡಾಟ್ ಕಾಂ.

ಕುಂದಾಪುರ, ಡಿ15: ಸಪ್ತಕ್ಷೇತ್ರಗಳಲ್ಲೊಂದಾದ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಇಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಶನಿವಾರದಿಂದ ಆರಂಭಗೊಂಡ ಧಾರ್ಮಿಕ ವಿಧಿ ವಿಧಾನಗಳು ಕಳೆದ ಮೂರು ದಿನಗಳಿಂದ ವಿಧಿವತ್ತಾಗಿ ನಡೆಯುತ್ತಿದ್ದು ನಡೆಯುತ್ತಿದ್ದು, ಇಂದು ಶ್ರೀ ವಿನಾಯಕ ದೇವರ ಬ್ರಹ್ಮ ರಥೋತ್ಸವ ಮತ್ತು ಯಂತ್ರೋದ್ಧಾರ ಪೂರ್ವಕ ಅಷ್ಟೋತ್ತರ ನಾಳೀಕೇರ ಮಹಾಗಣಪತಿ ಯಾಗ ನಡೆಯಿತು. ಮೊಲದ ದಿನ ಪೂರ್ವಾಹ್ನ ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ವಸ್ಥಿವಾಚನ, ಗಣಪತಿ ಹೋಮ, ಅಥರ್ವ ಶೀರ್ಷ ಉಪನಿಷತ್ ಹೋಮ, ಸತ್ಯ ಗಣಪತಿ ವೃತ, ಮಹಾ ಪೂಜೆ, ರಾತ್ರಿ ರಂಗ ಪೂಜೆ, ಡೋಲಾರೋಹಣ, ಪಲ್ಲಕಿ ಉತ್ಸವ ನಡೆಯಿತು. ಎರಡನೇ ದಿನ ಉಪನಿಷತ್ ಕಲಶಾಭಿಷೇಕ, ಗಣಪತಿ ಹೋಮ, ಸತ್ಯ ಗಣಪತಿ ವೃತ ಮಹಾಪೂಜೆ ನಡೆಯಿತು. ರಾತ್ರಿ ಪುರಮೆರವಣಿಗೆ ರಂಗ ಪೂಜೆ ಹಾಗೂ ಪಲ್ಲಕಿ ಉತ್ಸವ ನಡೆಯಿತು. ಸಂಜೆ ಗಂಟೆಯಿಂದ ಲಯಾಭಿನಯ ನಾಟ್ಯಧಾಮ ಬೆಂಗಳೂರು ಇವರಿಂದ ಲಲಿತಾ ಸಹಸ್ರನಾಮ ನೃತ್ಯ ರೂಪಕ, ಮೂರನೇ ದಿನ ಮಾರ್ಗಶಿರ ಶುದ್ಧ ತೃತಿಯಾ ಶನಿವಾರ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ ರಾತ್ರಿ ಪುರಮೆರವಣಿಗೆ, ರಂಗ ಪೂಜೆ, ಪಲ್ಲಕಿ ಉತ್ಸವ ನಡೆಯಿತು. ನಾಲ್ಕನೇಯ ದಿನ ದೇವಸ್ಥಾನದ ಅನುವಂಶಿಂಕ ಆಡಳಿತ ಮೊಕ್ತೇಸರರಾದ ಕೆ. ಲಕ್ಷ್ಮೀನಾರಾಯಣ ಉಪಾದ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕೆ. ಬಾಲಚಂದ್ರ ಉಪಾದ್ಯಾಯ ಹಾಗೂ ಸಹೋದರರು, ಅನುವಂಶಿಕ ಮೊಕ್ತೇಸರರಾದ ಕೆ. ಸೂರ್ಯನಾರಾಯಣ ಉಪಾದ್ಯಾಯ ಹಾಗೂ ಕೆ. ಶ್ರೀರಮಣ ಉಪಾದ್ಯಾಯರ ಮೇಲುಸ್ತುವಾರಿಯಲ್ಲಿ ಬ್ರಹ್ಮ ರಥೋತ್ಸವ ಹಾಗೂ ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಪತಿಯಾಗ ನಡೆಯಿತು.

ಬ್ರಹ್ಮ ರಥೋತ್ಸವ ಕಾರ್ಯಕ್ರಮದ ಜೊತೆಗೆ ಭಜಕರಿಂದ ಪಾನಕ ವಿತರಣೆ ಜೊತೆಗೆ ಮಹಾ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ರಥೋತ್ಸವದ ಅಂಗವಾಗಿ ಸಾಲಿಗ್ರಾಮ ಸತೀಶ್ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನ, ಹಾಗೂ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ ಯಕ್ಷಗಾನ ಬಯಲಾಟ ನಡೆದರೇ, ಕೊನೆಯ ದಿನ ಚೂರ್ಣೋತ್ಸವ, ಅವಭೃತ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ಕಾರ್ಯಕ್ರಮಗಳು ನಡೆಯುತ್ತದೆ.


Exit mobile version