Site icon Kundapra.com ಕುಂದಾಪ್ರ ಡಾಟ್ ಕಾಂ

ವಿಕ್ಟರಿ 2K25 ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಚಾಂಪಿಯನ್‌ಶಿಪ್ ಪ್ರಾಪ್ತಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ವಿಕ್ಟರಿ 2K25 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉಡುಪಿ ಜಿಲ್ಲೆಯ ಬಹಳಷ್ಟು ಶಾಲೆಗಳ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.

ಈ ಕಾರ್ಯಕ್ರಮದಲ್ಲಿ ಸಮೂಹ ಗಾಯನ, ಸಮೂಹ ನೃತ್ಯ, ನಿಧಿ ಅನ್ವೇಷಣೆ, ಚಿತ್ರಕಲೆ, ಏಕಪಾತ್ರಾಭಿನಯ, ಕಂಪ್ಯೂಟರ್ ಟೈಪಿಂಗ್, ವಿಜ್ಞಾನ ಮಾದರಿ ತಯಾರಿಕೆ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಿತ್ತು.

ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಿಂದ ಸಮೂಹಗಾಯನ ಸ್ಪರ್ಧೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ದಾಕ್ಷಾಯಣಿ ಎಸ್.ಕೆ., ಪೂರ್ವೀ ಜೆ. ಮೊಗೇರ, ಶ್ರೀನಿಧಿ ಕೊಠಾರಿ, 9ನೇ ತರಗತಿಯ ವಿದ್ಯಾರ್ಥಿಗಳಾದ ಕೃಪಾಲಿ ಮತ್ತು ಸಾನ್ವೀ ಎಸ್.ಬಿ. ಭಾಗವಹಿಸಿದ್ದರು. ಸಮೂಹ ನೃತ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಬ್ರಾಹ್ಮೀ ಪಿ. ಶೆಟ್ಟಿ, ಹನಿ ಎಸ್. ಭಂಡಾರಿ, ಪೃಥಾ, 9ನೇ ತರಗತಿಯ ವಿದ್ಯಾರ್ಥಿಗಳಾದ ದಿಶಾ ಶೆಟ್ಟಿ, ಸಾನ್ವೀ, ಸುರಕ್ಷಾ ಭಾಗವಹಿಸಿದ್ದರು. ನಿಧಿ ಅನ್ವೇಷಣೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ಪಲ್ಲವಿ ಎಮ್.ಎಚ್., ಸಮೃದ್ಧಿ, ಅನುಶ್ರೀ ಎಸ್.ಎಮ್. ಭಾಗವಹಿಸಿದ್ದರು.

ಚಿತ್ರಕಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾದ ಪೂರ್ವಿಕಾ ಎಲ್. ಪೂಜಾರಿ, ಏಕಪಾತ್ರಾಭಿನಯದಲ್ಲಿ 10ನೇ ತರಗತಿಯ ರಿಷಿಕಾ ರಾಮ ದೇವಾಡಿಗ, ಕಂಪ್ಯೂಟರ್ ಟೈಪಿಂಗ್ ನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಆಯುಷ್ ಎಸ್.ಟಿ, ಮತ್ತು ಎಚ್.ವಿನಾಯಕ್, ರಸಪ್ರಶ್ನೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಅದಿತಿ ಪೂಜಾರಿ ಮತ್ತು ದರ್ಶನ್ ಎಸ್ ದೇವಾಡಿಗ  ಭಾಗವಹಿಸಿದ್ದರು.

ಸಮೂಹಗಾಯನ, ಸಮೂಹನೃತ್ಯ, ಕಂಪ್ಯೂಟರ್ ಟೈಪಿಂಗ್ ಮತ್ತು ವಿಜ್ಞಾನ ಮಾದರಿ ತಯಾರಿಕೆಗಳಲ್ಲಿ ಪ್ರಥಮಸ್ಥಾನವನ್ನು, ರಸಪ್ರಶ್ನೆಯಲ್ಲಿ ದ್ವಿತೀಯಸ್ಥಾನವನ್ನೂ, ಏಕಪಾತ್ರಾಭಿನಯದಲ್ಲಿ ತೃತೀಯಸ್ಥಾನವನ್ನೂ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳು ಅಲಂಕರಿಸಿದ್ದಾರೆ. ಹಾಗೆಯೇ ಶಾಲೆಗೆ 15,550 ರೂಪಾಯಿ ನಗದು ಮತ್ತು ಚಾಂಪಿಯನ್ ಶಿಪ್ ಟ್ರೋಪಿಯನ್ನೂ ಗಳಿಸಿಕೊಟ್ಟಿದ್ದಾರೆ.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ವಿಜೇತರಾದ ವಿದ್ಯಾರ್ಥಿಗಳನ್ನು, ಮಾರ್ಗದರ್ಶನ ನೀಡಿದ ಶಿಕ್ಷಕವೃಂದವನ್ನೂ ಹುರಿದುಂಬಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಿದೆ. ವಿದ್ಯಾರ್ಥಿಗಳು ಗಳಿಸಿದಷ್ಟೇ ಮೌಲ್ಯವನ್ನು ಶಾಲೆಯ ವತಿಯಿಂದಲೂ ನೀಡುತ್ತೇವೆ. ಎಂದು ಉದ್ಘೋಷಿಸಿ ಮಕ್ಕಳ ಮನಸ್ಸನ್ನು ಮುದಗೊಳಿಸಿದರು.

Exit mobile version