Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಎಐಸಿಎಸ್‌ ಅಂತರ್‌ ಶಾಲಾಮಟ್ಟದ ಹ್ಯಾಂಡ್‌ಬಾಲ್‌ ಟೂರ್ನಮೆಂಟ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಎಐಸಿಎಸ್ ಅಂತರ್‌ ಶಾಲಾಮಟ್ಟದ ಹ್ಯಾಂಡ್‌ಬಾಲ್‌ ಟೂರ್ನಮೆಂಟ್ ’ಪಾಸ್ ಮಾಸ್ಟರ್’ ಹೆಸರಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಂತಾರಾಷ್ಟ್ರೀಯ ಟೆನಿಸ್ ಕೋಚರ್ ಆದ ಅಶ್ವಿನ್ ಕುಮಾರ್ ಪಡುಕೋಣೆ ಅವರು ಮಾತನಾಡಿ, ಈ ಶಾಲೆಯ ಪ್ರಾಂಶುಪಾಲರು ಆಟಗಾರರಿಗೆ ಉತ್ತಮವಾದ ಪ್ರೋತ್ಸಾಹಕರು. ಆಟಗಾರರು ತಮ್ಮ ಆಸಕ್ತಿಯಿಂದ, ತಮ್ಮ ಸಂತೋಷಕ್ಕಾಗಿ ಆಡಬೇಕು. ಪುನಃ ಪುನಃ ಆಟವಾಡಿ ಅಭ್ಯಾಸ ಮಾಡುವುದರಿಂದ ದೇಹವು ಅದಕ್ಕೆ ಸಿದ್ಧವಾಗುತ್ತದೆ. ವಿದ್ಯಾರ್ಥಿಗಳು ಹೇಗೆ ಮೆದುಳಿಗೆ ಕೆಲಸ ನೀಡುತ್ತಾರೋ ಹಾಗೆಯೇ ದೇಹದ ಎಲ್ಲಾ ಭಾಗಗಳಿಗೂ ಕೆಲಸ ನೀಡಬೇಕು. ದೇಹದ ಆರೋಗ್ಯಕ್ಕೆ ಯೋಗ್ಯವಾದ ಆಹಾರವನ್ನಷ್ಟೇ ಸ್ವೀಕರಿಸಬೇಕು ಎಂದರು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣ ಕುಮಾರ ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿ, ನಾಡಿನ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವ ಸಲುವಾಗಿ, ಮಕ್ಕಳ ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಈ ಸ್ಪರ್ಧೆಗಳು ನಡೆಸಲ್ಪಡುತ್ತವೆ. ಮಕ್ಕಳ ಸತತ ಪರಿಶ್ರಮದಿಂದಷ್ಟೇ ಸ್ಪರ್ಧೆಯಲ್ಲಿ ಗೆಲುವು ಸಾಧ್ಯ. ಸ್ವಾಭಿಮಾನದ ಬೆಳವಣಿಗೆಗೆ ಇದು ಪೂರಕ. ಸೋಲು ಕೂಡ ಜೀವನದ ಪಾಠವನ್ನು ನೀಡುತ್ತದೆ. ಆ ದಿಸೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳಿಗೆ ಅತ್ಯವಶ್ಯ ಕಾರ್ಯವಾಗಿದೆ. ಎಂದರು.

14 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗಿಯರ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ ವಿನ್ನರ್ ಸ್ಥಾನವನ್ನೂ, ಟ್ರಿನಿಟಿ ಸೆಂಟರ್ ಸ್ಕೂಲ್, ಉಡುಪಿ ರನ್ನರ್ ಸ್ಥಾನವನ್ನೂ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಮೂರನೆಯ ಸ್ಥಾನವನ್ನೂ ಪಡೆದುಕೊಂಡಿವೆ. ಬೆಸ್ಟ್ ಡಿಪೆಂಡರ್ ಸ್ಥಾನವನ್ನು ವರ್ಷಿಣೀ, ಬೆಸ್ಟ್ ಶೂಟರ್ ಸ್ಥಾನವನ್ನು ವರ್ಷಾ, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಪ್ರಿನ್‌ಕಿಯಾ ಪಡೆದು ಕೊಂಡಿದ್ದಾರೆ. ಇವರೆಲ್ಲ ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರದ ವಿದ್ಯಾರ್ಥಿಗಳಾಗಿದ್ದಾರೆ.

14 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ಲಿಟ್ಲ್‌ರಾಕ್ ಇಂಡಿಯನ್ ಸ್ಕೂಲ್ ವಿನ್ನರ್ ಸ್ಥಾನವನ್ನೂ, ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಅಂಗಡಿ ರನ್ನರ್ ಸ್ಥಾನವನ್ನೂ, ಟ್ರಿನಿಟಿ ಸೆಂಟರ್ ಸ್ಕೂಲ್, ಉಡುಪಿ ಮೂರನೆಯ ಸ್ಥಾನವನ್ನೂ ಪಡೆದುಕೊಂಡಿವೆ. ಬೆಸ್ಟ್ ಡಿಪೆಂಡರ್ ಸ್ಥಾನವನ್ನು ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನ ರಿಯಾನ್, ಬೆಸ್ಟ್ ಶೂಟರ್ ಸ್ಥಾನವನ್ನು ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಅಂಗಡಿಯ ತುಷಾರ್, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನ ಓಜೇಶ್ ಪಡೆದು ಕೊಂಡಿದ್ದಾರೆ.

17 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗಿಯರ ಸ್ಪರ್ಧೆಯಲ್ಲಿ ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರ ವಿನ್ನರ್ ಸ್ಥಾನವನ್ನೂ, ಟ್ರಿನಿಟಿ ಸೆಂಟರ್ ಸ್ಕೂಲ್, ಉಡುಪಿ ರನ್ನರ್ ಸ್ಥಾನವನ್ನೂ, ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಅಂಗಡಿಯು ಮೂರನೆಯ ಸ್ಥಾನವನ್ನೂ ಪಡೆದುಕೊಂಡಿವೆ. ಬೆಸ್ಟ್ ಡಿಪೆಂಡರ್ ಸ್ಥಾನವನ್ನು ಟ್ರಿನಿಟಿ ಸೆಂಟರ್ ಸ್ಕೂಲ್, ಉಡುಪಿಯ ಧರಣಿ, ಬೆಸ್ಟ್ ಶೂಟರ್ ಸ್ಥಾನವನ್ನು ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರದ ಸಾನ್ವೀ ಕಾಂಚನ್, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಎಸ್ ಎಮ್ ಎಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬ್ರಹ್ಮಾವರದ ಪ್ರತೀಕ್ಷಾ ಪಿ ದೇವಾಡಿಗ ಪಡೆದು ಕೊಂಡಿದ್ದಾರೆ.

17 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರ ವಿನ್ನರ್ ಸ್ಥಾನವನ್ನೂ, ಶ್ರೀ ಸಿದ್ಧಿವಿನಾಯಕ ವಸತಿಶಾಲೆಯು ರನ್ನರ್ ಸ್ಥಾನವನ್ನೂ, ಸೈಂಥ್ ಥೋಮಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಬೈಂದೂರು ಮೂರನೆಯ ಸ್ಥಾನವನ್ನೂ ಪಡೆದುಕೊಂಡಿವೆ. ಬೆಸ್ಟ್ ಡಿಪೆಂಡರ್ ಸ್ಥಾನವನ್ನು ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರದ ಮೋಹಿತ್, ಬೆಸ್ಟ್ ಶೂಟರ್ ಸ್ಥಾನವನ್ನು ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಬ್ರಹ್ಮಾವರದ ಅನೀಶ್, ಬೆಸ್ಟ್ ಆಲ್ ರೌಂಡರ್ ಸ್ಥಾನವನ್ನು ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಅಂಗಡಿಯ ಗಂಭೀರ್ ಪಡೆದುಕೊಂಡಿದ್ದಾರೆ.

ಬಹಳಷ್ಟು ಶಾಲೆಗಳಿಂದ ಬಂದ ಅಧ್ಯಾಪಕರು, ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಸ್ಪರ್ಧಾರ್ಥಿಗಳು, ಶಾಲಾ ಅಧ್ಯಾಪಕವೃಂದ, ಶಿಕ್ಷಕೇತರವೃಂದದವರೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ದೈಹಿಕ ಶಿಕ್ಷಕಿ ಲತಾ ಗೌಡ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಾದ ಪರ್ಣಿಕಾ ಶೆಟ್ಟಿ ಮತ್ತು ಶಿವರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಅನನ್ಯಾ ಮತ್ತು ವೈಷ್ಣವಿ ಸ್ವಾಗತವನ್ನು ನೆರವೇರಿಸಿದರೆ ವಿದ್ಯಾರ್ಥಿಗಳಾದ ಅಭಿನವ ಮತ್ತು ಅಪೂರ್ವಾ ಧನ್ಯವಾದ ಸಮರ್ಪಿಸಿದರು.

Exit mobile version