Site icon Kundapra.com ಕುಂದಾಪ್ರ ಡಾಟ್ ಕಾಂ

ಸಿ.ಎಸ್.ಇ.ಇ.ಟಿ. ಪರೀಕ್ಷೆ ಫಲಿತಾಂಶ: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ:
2025 ನವೆಂಬರ್‌ನಲ್ಲಿ ನಡೆದ ಸಿ.ಎಸ್.ಇ.ಇ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ವರ್ಷಾ ಕೋಟ್ಯಾನ್, ರ್ಯಾನ್‌ ಮಾಸ್ಕರೇನ್ಹಸ್, ಸುಪ್ರೀತಾ ಎಂ. ಕೆ., ಸಿಂಚನಾ, ವೀಕ್ಷಾ, ಮನೀಷಾ, ರಿಯಾ ಅಂಜುಮ್, ಸಿ. ಜ್ನಾನಿಕಾ ಶೆಟ್ಟಿ, ವೈಷ್ಣವಿ ರಾಜೇಶ್ ರೇನಕೆ ಹಾಗೂ ಅಭಿಷ್ ಆಚಾರ್ಯ ಮೊದಲ ಪ್ರಯತ್ನದಲ್ಲಿ  ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಆಳ್ವಾಸ್ ಕಾಲೇಜು 77% ದಷ್ಟು ಫಲಿತಾಂಶ ದಾಖಲಿಸಿದೆ.

ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕರಾದ ಅಶೋಕ ಕೆ.ಜಿ ಹಾಗೂ ಸಿ.ಎಸ್. ಸಂಯೋಜಕರಾದ ದೀಕ್ಷಾ ಅಸ್ರಣ್ಣ ಅಭಿನಂದಿಸಿದ್ದಾರೆ.

Exit mobile version