ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಂತಾರಾಷ್ಟ್ರೀಯ ರೋಟರಿ ಯುವಕರನ್ನು ಸೃಷ್ಟಿ ಮಾಡುವ ವೇದಿಕೆಗೆ ಕಂಕಣಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ರೋಟರಿ ಇಂರ್ಟಕ್ಟ್ ಮೂಲಕ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿ, ಪರಿಸರದ ಹಿರಿಯರನ್ನು ಗೌರವಿಸುವ ಕಾರ್ಯದ ಜತೆಗೆ ಶಿಕ್ಷಣ ಶಿಕ್ಷಣ ಮುಗಿದ ಬಳಿಕ ಪಠ್ಯಕ್ರಮದಲ್ಲಿ ಜೀವನಕ್ಕೆ ಬಹುಮುಖ್ಯವಾಗಿರುವ ನಾಯಕತ್ವದ ಗುಣದ ಜತೆಗೆ ಮಾನವೀಯ ಸಮಾಜ ಸೇವೆಯ ಮೂಲಕ ಸುಸ್ಥಿರವಾದ ಸಮಾಜ ನಿರ್ಮಾಣ ಮಾಡಲು ಸರ್ವ ಸನ್ನದ್ದರಾಗಬೇಕಾಗಿದೆ ಎಂದು ರೋಟರಿ ಆರ್‌ಐ ಜಿಲ್ಲೆ 3182 ಇದರ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು.

ಅವರು ಇಲ್ಲಿನ ಸುಣ್ಣಾರಿ ಎಕ್ಸಲೆಂಟ್ ಪಿಯು ಕಾಲೇಜಿನ ಸಭಾಂಗಣದಲ್ಲಿ ರೋಟರಿ ಇಂಟರ್ ನ್ಯಾಷನಲ್ ಜಿಲ್ಲೆ 3182 ಇದರ ರೋಟರಿ ಕ್ಲಬ್ ಬೈಂದೂರು ವಲಯ |ಆತಿಥ್ಯದಲ್ಲಿ ನಡೆದ ಪ್ರೇರಣಾ-2025 ಜಿಲ್ಲಾ ಇಂಟರ‍್ಯಾಕ್ಟ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷ ಮಹೇಶ್ ಹೆಗ್ಡೆ ಅವರು ಶುಭಹಾರೈಸಿದರು. ಸಹಾಯಕ ಗವರ್ನರ್ ಐ. ನಾರಾಯಣ, ವಲಯ ಫೆಸಿಲಿಟೇಟರ್ ಜಯಪ್ರಕಾಶ್ ಶೆಟ್ಟಿ, ಇಂಟರ‍್ಯಾಕ್ಟ್ ಜಿಲ್ಲಾ ಚೇರ್ ಮ್ಯಾನ್ ಸುರೇಶ್ ಬೇಳೂರು, ಇಂಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಅನುಪಮಾ ಶೆಟ್ಟಿ ಸಂಯೋಜಕ ಶಿವರಾಮ ಶೆಟ್ಟಿ ವಲಯ ಸೇನಾನಿಗಳಾದ ಬಷೀರ್ ಅಹಮ್ಮದ್, ಪ್ರಸಾದ್ ಪ್ರಭು, ಕೌಶಿಕ್ ಯಡಿಯಾಳ್, ಮುಖ್ಯೋಪಾಧ್ಯಾಯಿನಿ ಸರೋಜಿನಿ ಪಿ.ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಇಲ್ಲಿನ ಮಣೂರು ಪ್ರಾಂಶುಪಾಲ ಡಾ. ರಾಜೇಂದ್ರ ನಾಯಕ್ ಹಾಗೂ ಧಾರ್ಮಿಕ ಚಿಂತಕ ಎನ್.ಆರ್. ದಾಮೋದರ್ ಶರ್ಮಾ, ಬಾರಕೂರು ಅವರಿಂದ ಸೋಮಬಂಗೇರ ಸರಕಾರಿ ಕಾಲೇಜು ಮಾಹಿತಿ ಕಾರ್ಯಾಗಾರಗಳು ನಡೆಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡಿತು. ರಾಘವೇಂದ್ರ ಚರಣ್ ನಿರೂಪಿಸಿ, ಪ್ರದೀಪ ಶೆಟ್ಟಿ ವಂದಿಸಿದರು.