ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾಹೇಬರ ಕಟ್ಟೆ ವೃತ್ತಕ್ಕೆ ನೂತನ ದಾರಿದೀಪ ಊರ ದಾನಿಗಳು ಯುವ ಮನಸ್ಸಿನ ಯುವಕರು ಹಾಗೂ ಜನನಿ ಯುವ ಕನ್ನಡ ಸಂಘ ಇವರ ಸಹಕಾರದೊಂದಿಗೆ ಸ್ಥಳೀಯ ಗ್ರಾಮ ಪಂಚಾಯತ್‌ಗಳಾದ ಶಿರಿಯಾರ ಮತ್ತು ಯಡ್ತಾಡಿ ಇವರ ಸಹಭಾಗಿತ್ವದಲ್ಲಿ ಸಾಹೇಬರ ಕಟ್ಟೆ ವೃತ್ತಕ್ಕೆ ನೂತನ ದಾರಿದೀಪ ಅಳವಡಿಕೆ ಮಾಡಿಲಾಗಿದೆ.

ಇದರ ಉದ್ಘಾಟನೆಯನ್ನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಸ್ವಿಚ್ ಆನ್ ಮಾಡುವುದರ ಮುಖಿನ ಚಾಲನೆ ನೀಡಿ, ಇದಕ್ಕೆ ಸ್ಪಂದಿಸಿದ ದಾನಿಗಳಿಗೂ ಹಾಗೂ ಸಂಘ ಸಂಸ್ಥೆಯ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಶಿರಿಯಾರ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸುಧೀಂದ್ರ ಶೆಟ್ಟಿ, ಯಡ್ತಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಪ್ರಕಾಶ್ ಸಿ. ಶೆಟ್ಟಿ. ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಗೋಪಾಡಿ, ಜನನಿ ಯುವ ಕನ್ನಡ ಸಂಘ ಸಾಹೇಬರ ಕಟ್ಟೆ ಸದಸ್ಯರು, ಊರಿನ ದಾನಿಗಳು, ಎರಡು ಗ್ರಾಮ ಪಂಚಾಯಿತಿನ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.