ಕುಂದಾಪ್ರ ಡಾಟ್ ಕಾಂ ಸುದ್ದಿ.
ಅಮಾಸೆಬೈಲು: ವಿಷಪೂರಿತ ಹಾವು ಕಚ್ಚಿ ಮಹಿಳೆ ಮೃತಪಟ್ಟ ಘಟನೆ ಮಡಾಮಕ್ಕಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಮಾಂಡಿ ಮೂರುಕೈ ನಿವಾಸಿ ಜಲಜಾಕ್ಷಿ ಶೆಡ್ತಿ (76) ಮೃತರು.
ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ತಲೆಕೂದಲಿಗೆ ಹಾಕುವ ಚೌರಿ ತೆಗೆಯಲು ಚೀಲಕ್ಕೆ ಕೈ ಹಾಕಿದಾಗ ಅದರಲ್ಲಿದ್ದ ಹಾವು ಕಡಿದಿತ್ತು. ಅಸ್ವಸ್ಥಗೊಂಡಿದ್ದ ಅವರನ್ನು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು. ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.
ಸಹೋದರ ಭಾಸ್ಕರ ಶೆಟ್ಟಿ ನೀಡಿದ ದೂರಿನಂತೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

