ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಲ್ಫ್: ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ನೇತೃತ್ವದಲ್ಲಿ ಯುಎಇ ಕುಂದಗನ್ನಡಿಗರ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ಜರುಗಿದವು.
ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಅರಬ್ಬ ನಾಡಿನಲ್ಲಿ ನೆಲೆಸಿರುವ ಕುಂದಗನ್ನಡಿಗರು ಭಾಗವಹಿಸಿದ್ದರು. ಆಟೋಟ ಸ್ಫರ್ಧೆಗಳಿಗೆ ಐದು ತಂಡಗಳಾಗಿ ಮಾಡಲಾಗಿದ್ದು ಪ್ರತೀ ತಂಡಗಳಿಗೆ ಕುಂದಾಪುರದ ವಿಶೇಷತೆಗಳಲ್ಲಿ ಒಂದಾದ ಪಂಚಗಂಗಾವಳಿ ನದಿಗಳಾದ ಸೌರ್ಪಣಿಕ, ವರಾಹಿ, ಖೇಟಾ, ಕುಬ್ಜಾ ಮತ್ತು ಚಕ್ರಾ ಎಂದು ಕುಂದಾಪುರದಲ್ಲಿ ಸಂಗವಿಸುವ ಐದು ನದಿಗಳ ಹೆಸರು ನೀಡಲಾಯಿತು.

ಟೀಮ್ ಗ್ರಾಮೀಣ ಆಟೋಟ ಸ್ಫರ್ಧೆಗಳ ಜೊತೆಗೆ ವ್ಯಯಕ್ತಿಕ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದೇ ರೀತಿ ಚಾಂಪಿಯನ್ ಮಂಜುನಾಥ ನಾಯಕತ್ವದ ಕುಬ್ಜಾ ತಂಡ ಹೊರಹೊಮ್ಮಿದರದೆ ರನ್ನರ್ಸ ಸಂತೋಷ ನಾಯಕತ್ವದ ಸೌಪರ್ಣಿಕ ತಂಡ ಹೊರಹೊಮ್ಮಿತು.
ಕಾರ್ಯಕ್ರಮವನ್ನು ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಸದಾನ್‌ದಾಸ್ ಉಧ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸುರೇಶ್ ಡಿ ಹೆಚ್ ಎಲ್ ಮತ್ತು ಬಿ.ಎಂ ಗ್ರೂಫ್ ಚೇರ್ಮೇನ್ ಡಾ. ಕನಕರಾಜ್ ಪ್ರವೀಣ್ ಆಚಾರ, ಸಮರ್ಥ್ ಶೆಟ್ಟಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಾನ್‌ದಾಸ್, ಉಪಾಧ್ಯಕ್ಷರಾದ ದಿನೇಶ್ ದೇವಾಡಿಗ ಮತ್ತು ಸುಜೀತ್ ಶೆಟ್ಟಿ ಕಾಳವಾರ, ಕಾರ್ಯದರ್ಶಿಯಾದ ಸುಧಾಕರ ಪೂಜಾರಿ ಪಡುಕೋಣೆ, ಸದಸ್ಯರುಗಳಾದ ವಾಸು ಕುಮಾರ್ ಶೆಟ್ಟಿ, ಮಂಜುನಾಥ ದೇವಾಡಿಗ, ಸತೀಶ್ ಹಂಗಳೂರು, ಮನೋಜ್ ದೇವಾಡಿಗ, ಚಂದ್ರಶೇಖರ ಕೋಡಿ, ವಿಘ್ನೇಶ್ ಕುಂದಾಪುರ ಮತ್ತು ಆಶಾ ಜೊತೆಗಿದ್ದರು.
ಬೆಳಿಗ್ಗೆಯಿಂದ ಸಂಜೆ ತನಕ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಕುಂದಾಪ್ರಕನ್ನಡಿಗರು ಬಳಹ ಉತ್ಸುಕರಾಗಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು.
ಸಂಜೆ ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ನಿರ್ವಹಣೆ ಮತ್ತು ನಿರೂಪಣೆಯನ್ನು ಸಂಘದ ಸದಸ್ಯರಾದ ವಿಘ್ನೇಶ್ ಕುಂದಾಪುರ ಮಾಡಿದರು.