ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸುರಭಿ (ರಿ) ಬೈಂದೂರು ಸಾಂಸ್ಕೃತಿಕ ಸಾಹಿತ್ಯ ಸೇವಾ ಪ್ರತಿಷ್ಠಾನ ಇದರ ಬೆಳ್ಳಿ ಹಬ್ಬದ ಸಂಭ್ರಮದ ಪ್ರಯುಕ್ತ ಡಿಸೆಂಬರ್ 14ರಿಂದ 21ರ ತನಕ 08 ದಿನಗಳ ಕಾಲ ರಾಜ್ಯ ಮಟ್ಟದ ನಾಟಕ ಸ್ಪರ್ಧೆ ಸಂಜೆ 07 ಗಂಟೆಗೆ ಯಡ್ತರೆ ಜೆ.ಎನ್.ಆರ್ ಕಲಾಮಂದಿರದ ಹೊರಾಂಗಣ ಸಭಾ ವೇದಿಕೆಯಲ್ಲಿ ನಡೆಯಲಿದೆ ಎಂದು ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ತಿಳಿಸಿದ್ದಾರೆ.
ಅವರು ಗುರುವಾರ ಬೈಂದೂರು ರೋಟರಿ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಮ್ಮ ಸಂಸ್ಥೆ ಬೆಳ್ಳಿಹಬ್ಬದ ವರ್ಷವನ್ನು ಸಂಭ್ರಮಿಸುತ್ತಿದ್ದು ವರ್ಷವಿಡಿ ವಿವಿಧ ಸಾಂಸ್ಕೃತಿಕ ಸಾಹಿತಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಆಯೋಜಿಸಲಾಗುತ್ತಿದೆ ಎಂದರು.

ಡಿಸೆಂಬರ್ 14ರ ಆದಿತ್ಯವಾರ ರಂಗಾಯಣ ಟ್ರಸ್ಟ್ ಮೈಸೂರು ಪ್ರಸ್ತುತಿಯ ನಾಟಕ “ಚಾಮಚೆಲುವೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ: ಡಾ. ಸುಜಾತ ಅಕ್ಕಿ, ನಿರ್ದೇಶನ ವಿಕಾಸ್ ಚಂದ್ರ, ಡಿಸೆಂಬರ್ 15ರ ಸೋಮವಾರ ಕಲಾರೋಹಣ ಶಿವಮೊಗ್ಗ ಪ್ರಸ್ತುತಿಯ ನಾಟಕ “ನನ… ನನಮ್ ರಸ್ತೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ: ಡಾ. ಗಜಾನನ ಶರ್ಮಾ ಬೆಂಗಳೂರು, ನಿರ್ದೇಶಕ ಬಿ.ಆರ್. ರೇಣುಕಪ್ಪ, ಡಿಸೆಂಬರ್ 16ರ ಮಂಗಳವಾರ ಸುಮನಸ ಕೊಡವೂರು ಉಡುಪಿ ಪ್ರಸ್ತುತಿಯ ನಾಟಕ “ಈದಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಸಮೀರ್ ಪೇನ್ಕರ್ ಮುಂಬೈ, ಕನ್ನಡಕ್ಕೆ: ಜಯಶ್ರೀ ಇಡ್ಕಿದು, ನಿರ್ದೇಶನ: ವಿದ್ದು ಉಚ್ಚಿಲ, ಡಿಸೆಂಬರ್ 17ರ ಬುಧವಾರ ಅದಮ್ಯ ರಂಗ ಸಂಸ್ಕೃತಿ ಟ್ರಸ್ಟ್ ಬೆಂಗಳೂರು ಪ್ರಸ್ತುತಿಯ ನಾಟಕ “ಮಾರಿಕಾಡು” ಪ್ರದರ್ಶನಗೊಳ್ಳಿದೆ. ನಾಟಕ ಮೂಲ ಶೇಕ್ಸ್ʼಪಿಯರ್, ರಚನೆ: ಡಾ. ಚಂದ್ರಶೇಖರ ಕಂಬಾರ್, ನಿರ್ದೇಶಕ: ಮಾಲತೇಶ್ ಬಡಿಗೇರ್, ಡಿಸೆಂಬರ್ 18ರ ಗುರುವಾರ ಸಹ್ಯಾದ್ರಿ ರಂಗತಂಡ ರಿ. ಶಿವಮೊಗ್ಗ ಪ್ರಸ್ತುತಿಯ ನಾಟಕ “ರಾವಿ ನದಿಯ ದಂಡೆಯಲ್ಲಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಅಷ್ಟರ್ ವಜಾ ಹತ್ ನವದೆಹಲಿ, ನಿರ್ದೇಶನ: ಕಾಂತೇಶ ಕದರಮಂಡಲಗಿ, ಡಿಸೆಂಬರ್ 19ರ ಶುಕ್ರವಾರ ಸ್ಪಂದನ ರಿ. ಸಾಗರ ಪ್ರಸ್ತುತಿಯ ನಾಟಕ “ಪ್ರಾಣ ಪದ್ಮಿನಿ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ಮಂಜುನಾಥ ಎಲ್. ಬಡಿಗೇರ, ಡಿಸೆಂಬರ್ 20ರ ಶನಿವಾರ ಕ್ರಾನಿಕಲ್ಸ್ ಆಫ್ ಇಂಡಿಯಾ ರಿ. ಬೆಂಗಳೂರು ಪ್ರಸ್ತುತಿಯ ನಾಟಕ “ಶಿವೋಹಂ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ಗಣೇಶ್ ಮಂದಾರ್ತಿ, ಡಿಸೆಂಬರ್ 21ರ ಆದಿತ್ಯವಾರ ನಮ್ದೇ ನಟನೆ ರಿ. ಬೆಂಗಳೂರು ಪ್ರಸ್ತುತಿಯ ನಾಟಕ “ಮಗಳೆಂಬ ಮಲ್ಲಿಗೆ” ಪ್ರದರ್ಶನಗೊಳ್ಳಲಿದೆ. ನಾಟಕ ರಚನೆ ಮತ್ತು ನಿರ್ದೇಶನ: ರಾಜೇಂದ್ರ ಕಾರಂತ್ ಬೆಂಗಳೂರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಉಪಾಧ್ಯಕ್ಷರಾದ ಲಕ್ಷ್ಮಣ ಕೊರಗ ಬೈಂದೂರು, ಸುರೇಶ್ ಹುದಾರ್ ಯಡ್ತರೆ, ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಜಿ. ಮಯ್ಯಾಡಿ, ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಪಡುವರಿ ಉಪಸ್ಥಿತರಿದ್ದರು.
ಸುರಭಿ ರಿ. ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.