ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನಿಟ್ಟೆ ಎನ್. ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಹಾಯಕ ಪ್ರಾಧ್ಯಾಪಕ ಸವಿಧನ್ ಶೆಟ್ಟಿ ಸಿ.ಎಸ್. ಅವರಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಸುರತ್ಕಲ್ ಡಾಕ್ಟರೇಟ್ ಪದವಿ ನೀಡಿದೆ. ಇತ್ತೀಚೆಗೆ ನಡೆದ 23ನೇ ವಾರ್ಷಿಕ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಅವರು ಮಂಡಿಸಿದ ಎನ್. ಚಾನೆಲ್ ಮಾಡೆಲ್‌ಗಳು ಮತ್ತು ಕಾರ್ಯಕ್ರಮತೆಯ ವಿಶ್ಲೇಷಣೆಯ ವೈವಿಧ್ಯತೆಯ ಪ್ರಸಾರ ಮತ್ತು ದೋಷ ನಿಯಂತ್ರಣ ಕೋಡಿಂಗ್ ಯೋಜನೆಗಳು ನೀರಿನ ಅಡಿಯಲ್ಲಿ ಲಂಬವಾದ ವೈರ್‌ಲೆಸ್ ಅಪ್ಟಿಕಲ್ ಸಂವಹನ ಲಿಂಕ್‌ಗಳು” ಎಂಬ ವಿಷಯಕ್ಕೆ ಪ್ರೊ. ಯು. ಶ್ರೀಪತಿ ಅಚಾರ್ಯ ಅವರು ಮಾರ್ಗದರ್ಶನ ಪಡೆದು ಪ್ರಬ೦ಧ ಮಂಡಿಸಿದ್ದರು.
ಸವಿಧನ್ ಶೆಟ್ಟಿ ಅವರು ಪಿಡಬ್ಲ್ಯೂಡಿ, ನಿವೃತ್ತ ಶೆಟ್ಟಿ ಎಕ್ಸಿಕ್ಯೂಟಿವ್ ಇಂಜೀನಿಯರ್ ಮೇಪು ಶಶಿಧರ ಶೆಟ್ಟಿ ಮತ್ತು ಹೊಳಗೆ ವಿಮಲಾ ಎಸ್. ಶೆಟ್ಟಿಯವರ ಪುತ್ರ.

