Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಕೊಲೆ ಬೆದರಿಕೆ ಪ್ರಕರಣದಲ್ಲಿ ಐವರ ಬಂಧನ

ಕುಂದಾಪ್ರ ಡಾಟ್ ಕಾಂ ಸುದ್ದಿಮ
ಕುಂದಾಪುರ:
ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿ ತೆಕ್ಕಟ್ಟೆಯ ಅಬ್ದುಲ್ ಲತೀಫ್ ಮೊಹಿದ್ದೀನ್ ಹಾಗೂ ಅವರೊಂದಿಗಿದ್ದ ಮನೆಯವರಿಗೆ ಡಿ.10ರ ರಾತ್ರಿ ಹಲ್ಲೆಗೈದು, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ರಿಯಾಸುದ್ದೀನ್, ಸುಹೇಲ್ ಅಹಮ್ಮದ್, ಸರ್ಫರಾಜ್, ಮಹಮ್ಮದ್ ತನೂಫ್ ಹಾಗೂ ಸೌಹಾನ್ ಬಂಧಿತರು.

ಅಬ್ದುಲ್ ಲತೀಫ್ ಮೊಹಿದ್ದೀನ್ (39) ಹಾಗೂ ಅವರ ಪತ್ನಿ ಮಂಗಳೂರು ಕಂಕನಾಡಿಯ ರೂಹಿ ಶಮಾ ನಡುವೆ ವೈಮನಸ್ಸು ಉಂಟಾಗಿ ಪ್ರತ್ಯೇಕವಾಗಿದ್ದರು. ಡಿ.10ರಂದು ರಾತ್ರಿ 7 ವರ್ಷದ ಪುತ್ರಿಯನ್ನು ಪತ್ನಿಗೆ ತೋರಿಸಲೆಂದು ಕರೆದುಕೊಂಡು ಬಂದಿದ್ದರು. ಈ ವೇಳೆ ಪತ್ನಿಯ ಜತೆ ಬಂದಿದ್ದಈ ಐವರು ಆರೋಪಿಗಳು ತನಗೆ ಹಲ್ಲೆ ಮಾಡಿರುವುದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ. ಜತೆಗೆ ಪುತ್ರಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ಪ್ರಯತ್ನಿಸಿರುವುದಾಗಿ ಲತೀಫ್ ದೂರು ನೀಡಿದ್ದರು.

Exit mobile version