Kundapra.com ಕುಂದಾಪ್ರ ಡಾಟ್ ಕಾಂ

ಕುವೈತ್‌ನ ಸುರೇಶ್ ರಾವ್ ನೇರಂಬಳ್ಳಿ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿ ಪ್ರದಾನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮಸ್ಕತ್:
ಓಮಾನ್ ದೇಶದ ಮಸ್ಕತ್ ನಲ್ಲಿ ಕನ್ನಡ ಸಂಘ ಮಸ್ಕತ್ ಆಯೋಜಿಸಿದ್ದ ಮೂರನೇ ‘ವಿಶ್ವ ಕನ್ನಡ ಹಬ್ಬ’ ದಲ್ಲಿ  ಕುವೈತ್‌ ನಿಂದ ಆಗಮಿಸಿದ ಸುರೇಶ್ ರಾವ್ ನೇರಂಬಳ್ಳಿ ಅವರಿಗೆ, ಕನ್ನಡ ಸೇವೆ ಹಾಗೂ ಸಾಮಾಜಿಕ ಸೇವೆಗಾಗಿ  ವಿಶ್ವ ಮಾನ್ಯ ಬಿರುದಿನಿಂದ ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಮ್ಮೇಳನದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಸರ್ವಾಧ್ಯಕ್ಷರಾದ ನಾಡೋಜ ಷಡಕ್ಷರಿ, ನಟಿ ಸುಧಾರಾಣಿ, ನೆನಪಿರಲಿ ಖ್ಯಾತಿಯ ಪ್ರೇಮ್, ನಾಗೇಂದ್ರ ಪ್ರಸಾದ್, ಸು ಫ್ರಮ್‌ ಸು ಖ್ಯಾತಿಯ ರವಿಯಣ್ಣ, ಕಾಂತಾರ ಖ್ಯಾತಿಯ ಪ್ರಕಾಶ್ ತೂಮಿನಾಡು ರಂತಹ ಹಲವಾರು ಚಲನಚಿತ್ರ ತಾರೆಯರು, ಮೂರನೇ ‘ವಿಶ್ವ ಕನ್ನಡ ಹಬ್ಬ’ ದಲ್ಲಿ  ಭಾಗವಹಿಸಿದ್ದರು.

ಅದೇ ರೀತಿ ಅನೇಕ ಸಾಹಿತಿಗಳು, ಹಿರಿಯ ಪತ್ರಕರ್ತರಾದ ವಿಶ್ವೇಶ್ವರ ಭಟ್, ಹಲವಾರು ಪತ್ರಕರ್ತ ಮಿತ್ರರು,  ವಿಧಾನಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವ ರಹೀಂ ಖಾನ್ ಮತ್ತು ವೆಂಕಟೇಶ್ ಮಾಜಿ ಶಾಸಕ ಮೊಯಿದ್ದೀನ್ ಬಾವ ಕನ್ನಡ ಸಂಘ ಮಸ್ಕತ್ ನ ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ಹಿತೇಶ್, ಡಾ. ನಿರ್ಮಲಾ ಅಮರೇಶ್, ಸಿಎ ರಮಾನಂದ ಪ್ರಭು, ಸಿಎ ರಾಮಚಂದ್ರ ಭಟ್ , ಕನ್ನಡ ಸಂಘ ಬಹರೇನ್ ಅಧ್ಯಕ್ಷರಾದ ಅಜಿತ್ ಬಂಗೇರ್, ಹಾಗೂ ಹಲವಾರು ದೇಶಗಳ ಕರ್ನಾಟಕ ಮೂಲದ ಸಂಘಟನೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಗಲ್ಫ್ ಕನ್ನಡಿಗರ ಒಕ್ಕೂಟದ (GKO) ಮಸ್ಕತ್ ನ ಪದಾಧಿಕಾರಿಗಳು ಹಲವು ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಎಲ್ಲಾ ಗಣ್ಯರ ಸಮ್ಮುಖದಲ್ಲಿ ಮಹರ್ಷಿ ಡಾ. ಆನಂದ್ ಗುರೂಜಿ ಹಾಗೂ ಶ್ರೀ ಬಸವ ರಮಾನಂದ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಆಶೀರ್ವಾದದೊಂದಿಗೆ ದಿವ್ಯ ಹಸ್ತಗಳಿಂದ  ಸುರೇಶ್ ರಾವ್ ನೇರಂಬಳ್ಳಿ ಅವರಿಗೆ ವಿಶ್ವ ಮಾನ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸ್ವೀಕರಿಸಿ ಮಾತನಾಡಿದ ಅವರು, ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿರುವುದಕ್ಕೆ ಎಲ್ಲಾ ಗಣ್ಯರಿಗೆ ಮತ್ತು ಮಸ್ಕತ್‌ನ ಕನ್ನಡ ಸಂಘದ ಸದಸ್ಯರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

 

Exit mobile version