Kundapra.com ಕುಂದಾಪ್ರ ಡಾಟ್ ಕಾಂ

ಕೋಟೇಶ್ವರ: ಬಿಜೆಪಿಯಿಂದ ಸಮಗ್ರ ಮತದಾರ ಪಟ್ಟಿ ಪರಿಷ್ಕರಣಿಯ ಕಾರ್ಯಗಾರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೂತ್ ಸಂಖ್ಯೆ 61ರಿಂದ 80ರ ಸಮಗ್ರ ಮತದಾರ ಪಟ್ಟಿಯ ಕಾರ್ಯಗಾರ ಕೋಟೇಶ್ವರದ ಶಾರದ ಕಲ್ಯಾಣ ಮಂಟಪದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಅಧ್ಯಕ್ಷತೆಯಲ್ಲಿ ನೆರವೇರಿತು.

ಪಕ್ಷದ ವತಿಯಿಂದ ನೇಮಕ ಮಾಡಿದ ಬಿ.ಎಲ್ಎ 2 ಇವರ ಮುಂದಿನ ದಿನದಲ್ಲಿ ಪೂರ್ಣ ಪ್ರಮಾಣದ ಕಾರ್ಯಗಾರ ಮುಗಿದ ತಕ್ಷಣ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್ಎ- 2 ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಕುಂದಾಪುರ ಬಿಜೆಪಿ ಕ್ಷೇತ್ರಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಅವರು ಹೇಳಿದರು.

ಕಾರ್ಯಕ್ರಮದ ಬಗ್ಗೆ ಬಿಎಲ್ ಎ 01 ಇದರ ಸಂಚಾಲಕ ರಾಜೇಶ್ ಶೆಟ್ಟಿ ಶಿರೂರು ಮೂರ್ ಕೈ ಅವರು ಬೂತ್ ಮಟ್ಟದಲ್ಲಿ ಮತದಾರರ ಪರಿಷ್ಕಣಿಯ ಕಾರ್ಯದ ವಿಚಾರಧಾರೆಗಳ ಬಗ್ಗೆ ವಿವರಿಸಿದರು. 

ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆಎಸ್ ಹಾಗೂ ಬಿಎಲ್‌ಎ 2ನ ಸದಸ್ಯರು ಉಪಸ್ಥಿತರಿದ್ದರು. ಪ್ರಕಾಶ್ ಪೂಜಾರಿ ಬೀಜಾಡಿ ಸರ್ವರನ್ನು ಸ್ವಾಗತಿಸಿ, ವಂದಿಸಿದರು.

Exit mobile version