Kundapra.com ಕುಂದಾಪ್ರ ಡಾಟ್ ಕಾಂ

ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ನಾವುಂದದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಕಲ ಚೇತನ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ  ಮಂಗಳವಾರ ನಡೆಸಲಾಯಿತು.

ಗ್ರಾಮ ಪಂಚಾಯತ್ ಸದಸ್ಯರಾದ ರಾಮ ಖಾರ್ವಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ ಗಾಣಿಗ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಮುತ್ತು ಮೊಗವೀರ, ಬೈಂದೂರು ಬಿ ಆರ್ ಸಿ ಸಮನ್ವಯ ಅಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ, ಬಿ ಆರ್ ಪಿ ಗಳಾದ ಮಂಜುನಾಥ ದೇವಾಡಿಗ, ರಾಜೇಶ್,  ಸಿಆರ್ಪಿಗಳಾದ ಗಣೇಶ್ ಪೂಜಾರಿ, ಶೈಲಜಾ, ರವಿಚಂದ್ರ ,ನಾಗರಾಜ್ ಶೆಟ್ಟಿ, ಶಿಬಿರದ ವೈದ್ಯಾಧಿಕಾರಿಗಳಾದ ಡಾ. ನಾಗೇಶ್ ಫಿಸಿಷಿಯನ್, ಕಣ್ಣಿನ ತಜ್ಞರಾದ ಡಾ. ವಿಜಯಲಕ್ಷ್ಮಿ, ಆರ್ಥೋ ಸ್ಪೆಷಲಿಸ್ಟ್ ಡಾ. ಅರವಿಂದ ಹೆಗಡೆ, ಡಾ.ವೀಣಾ ವಾಕ್ ಮತ್ತು ಶ್ರವಣ ತಜ್ಞರು, ಆಡಿಯೋ ಲಾಜಿಸ್ಟ್ ಗಳಾದ ಶಮೀಕ್ಷಾ, ನೆಲಿಶಾ, ಗೌರಿ ಫಿಸಿಯೋಥೆರಪಿಸ್ಟ್ ಶ್ರೇಯ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ವೈಶಾಖ್ ಉಪಸ್ಥಿತರಿದ್ದರು.

ಅಲಿಂ ಕೋ ಸಂಸ್ಥೆಯ ಡಾ| ರಂಜನ್ ಪಾಂಡೆ ಮತ್ತು ತಂಡದವರು ಫಲಾನುಭವಿಗಳಿಗೆ ಸಾಧನ ಸಲಕರಣೆಗಳನ್ನು ಶಿಫಾರಸ್ಸು ಮಾಡಿದರು. ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾಕ್ಟರ್ ಪ್ರೇಮಾನಂದ ಅವರು ಪೋಷಕರಿಗೆ ಎಂಡೋ ಸಲ್ಫಾನ್ ಕಾರ್ಡು ಮಾಡಿಸುವ ವಿಧಾನ ಮತ್ತು ಪ್ರಯೋಜನಗಳನ್ನು ಶಿಬಿರದಲ್ಲಿ ತಿಳಿಸಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ  ಉಪಾಧ್ಯಾಯರಾದ ರವಿ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸರ್ವರನ್ನು ಸ್ವಾಗತಿಸಿದರು. ಬಿ ಐ ಈ ಆರ್ ಟಿ ನಾಗರತ್ನ ಧನ್ಯವಾದ ಗೈದರು.

ಭಾಗವಹಿಸಿದ ಮಕ್ಕಳ ವಿವರ ಈ ಕೆಳಗಿನಂತಿವೆ .

ಪ್ರಾಥಮಿಕ ವಿಭಾಗ:

ID – 11 + 2 = 13

L MI-2 + I = 3

LV- 1 + O = 1

SL – I+0=1

HI-1+2=3

ASD-1+0=1

CP-0+1=1

Total -17+6=23

ಪ್ರೌಢ ವಿಭಾಗ:

ID-8+2=10

MD-1+1=2

LV-1+1=2

HI-0+1=1

Total-10+5=15

ಒಟ್ಟು 27+11=38

Exit mobile version