Site icon Kundapra.com ಕುಂದಾಪ್ರ ಡಾಟ್ ಕಾಂ

ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಹಟ್ಟಿಅಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು ಶಿಕ್ಷಣ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯಾದ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಪಡೆದುಕೊಂಡಿದೆ.

ಶಿಕ್ಷಣ ಕ್ಷೇತ್ರದಲ್ಲಿ ತರಲಾಗುತ್ತಿರುವ ಕ್ರಾಂತಿಕಾರಿ ಬದಲಾವಣೆಗಳು-ಸುಧಾರಣೆಗಳು, ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಪರಿಸರ ಸ್ನೇಹಿ ಕಾರ್ಯಕ್ರಮಗಳು, ಸಮಾಜಕ್ಕೆ ನೀಡಲಾಗುತ್ತಿರುವ ಕೊಡುಗೆಗಳು ಮತ್ತು ಪಠ್ಯೇತರ ಚಟುವಟಿಕೆ ವಿಭಾಗದಲ್ಲಿ ಶಾಲೆಯು ತೋರಿಸುತ್ತಿರುವ ವಿಶೇಷ ಆಸಕ್ತಿ ಮತ್ತು ಪ್ರೋತ್ಸಾಹಗಳನ್ನು ಗಮನಿಸಿ ಈ ಗೌರವ ನೀಡಲಾಗಿದೆ.

ಈ ಪ್ರಶಸ್ತಿಯನ್ನು ಶಾಲೆಯ ಹಿರಿಯ ಅಧ್ಯಾಪಕಿಯಾದ ಬೇಬಿ ಎಸ್. ನಾಯ್ಕ್ ಅವರು ಶಾಲೆಯ ಪರವಾಗಿ ಸಮಾರಂಭದಲ್ಲಿ ಸ್ವೀಕರಿಸಿದರು.

ಮುಂಬೈನಲ್ಲಿ ನಡೆದ ಈ ಕಾರ್ಯಕ್ರಮವು ESFE ಹಾಗೂ ಟೈಮ್ಸ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಎಜುಕೇಶನ್ ಸಪ್ಲೈ ಮತ್ತು ಫ್ರಾಂಚೈಸಿ ಎಕ್ಸ್ಪೋ  ಕೂಡ ನಡೆಯಿತು.

ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರರು ಶಾಲೆಯ ಸಿಬ್ಬಂದಿವರ್ಗ ಮತ್ತು ಆಡಳಿತ ಮಂಡಳಿಯು ಪ್ರೋತ್ಸಾಹ ನೀಡುತ್ತಿರುವುದು, ಮಕ್ಕಳು ಸದಾ ಕ್ರಿಯಾಶೀಲರಾಗಿ, ಸಾಧಿಸುವ ಛಲವುಳ್ಳವರಾಗಿ ಮುಂದೆ ಸಾಗುತ್ತಿರುವುದು ನಮಗೆ ಈ ಗೌರವಪ್ರಾಪ್ತಿಗೆ ಸಹಾಯಕವಾಯಿತು ಎಂದು ಸಂತೋಷ ವ್ಯಕ್ತಪಡಿಸಿದರು.

Exit mobile version