Site icon Kundapra.com ಕುಂದಾಪ್ರ ಡಾಟ್ ಕಾಂ

ಕಾಂಗ್ರೆಸ್ ಪುಡಾರಿಗಳಿಂದ ಬಿಜೆಪಿ ಯುವಮೋರ್ಚಾ ಜಿಲ್ಲಾದ್ಯಕ್ಷರ ವಿರುದ್ದ ಅಪಪ್ರಚಾರ: ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ

ಕುಂದಾಪ್ರ ಡಾಟ್ ಕಾಂ‌ ಸುದ್ದಿ. 
ಬೈಂದೂರು:
ಬಿಜೆಪಿ ಯುವಮೋರ್ಚಾ ಉಡುಪಿ ಜಿಲ್ಲಾ ಅದ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯ ಆರಂಭಮಾಡಿ, ಗ್ರಾಮಪಂಚಾಯತ್ ಅದ್ಯಕ್ಷರಾಗಿ, ಪೇಜಾವರ ವಿಶ್ವಪ್ರಸನ್ನರ ಮಾರ್ಗದರ್ಶನದಲ್ಲಿ ಗೋವಿಗಾಗಿ ಮೇವು ಸಂಘಟನೆಮೂಲಕ ರಾಜ್ಯದ ಮನೆಮಾತದವರು ಯುವಮೋರ್ಚಾ ಉಡುಪಿ ಜಿಲ್ಲಾ ಅದ್ಯಕ್ಷರಾಗಿ ಪಾದರಸದಂತೆ ಸದಾ ಕಾಂಗ್ರೆಸ್ ಪಕ್ಷದ ವಿರುದ್ದ ಗುಡುಗುವ ಇವರನ್ನು ಹತ್ತಿಕ್ಕಲು ಅಪಪ್ರಚಾರಕ್ಕೆ ಕಾಂಗ್ರೆಸ್ ಪಕ್ಷ ಮುಂದಾಗಿದೆ. ಇದನ್ನು ಖಂಡಿಸುವುದಾಗಿ ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ಅದ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ ವ್ಯಕ್ತಪಡಿಸಿದರು

ಬಾರ್ಕೂರಿನಲ್ಲಿ ಪ್ರಥ್ವಿರಾಜ್ ಅವರ ಮಾಲಕತ್ವದ ಸಂಕಮ್ಮ ತಾಯಿ ರೆಸಾರ್ಟ್ ನಲ್ಲಿ ನೇಪಾಳ ಮೂಲದ ಪ್ರಜೆ ಗಳು ಕೆಲಸದಲ್ಲಿರುವುದನ್ನೇ ದೊಡ್ಡ ದೇಶದ್ರೋಹ ಎನ್ನುವ ರೀತಿ ಬಿಂಬಿಸಿ ಅವರ ತೇಜೆವಧೆ ಮಾಡುತ್ತೇವೆ ಎನ್ನುವ ಭ್ರಮೆಯಲ್ಲಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಯುವಮೋರ್ಚಾ ಬೈಂದೂರು ಮಂಡಲ ಅದ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಆಕ್ರೋಶ ವ್ಯಕ್ತಪಡಿಸಿದರು ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಯುವಮೋರ್ಚಾ ಜಿಲ್ಲಾ ಅಧ್ಯಕ್ಷರ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

Exit mobile version