Site icon Kundapra.com ಕುಂದಾಪ್ರ ಡಾಟ್ ಕಾಂ

ವಲಯ ಮಟ್ಟದ ಪ್ರತಿಭಾ ಕಾರಂಜಿ: ಜನತಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಇವರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿಜೂರಿನಲ್ಲಿ ನಡೆದ ಬೈಂದೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಿರಿಮಂಜೇಶ್ವರದ ಜನತಾ ನ್ಯೂ ಇಂಗ್ಲೀಷ್‌ ಮೀಡಿಯಂ ಹಾಗೂ ಹೆಮ್ಮಾಡಿಯ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ಸಾಧನೆಗೈದಿದ್ದಾರೆ.

ಕನ್ನಡ ಭಾಷಣ – ಸಂಜನಾ ಶೆಟ್ಟಿ ಪ್ರಥಮ, ಕನ್ನಡ ಪ್ರಬಂಧ- ಸುಶ್ಮಿತಾ ನಾಯ್ಕ ಪ್ರಥಮ, ಸಂಸ್ಕ್ರತ ಧಾರ್ಮಿಕ ಪಠಣ-ಅವನಿ ಭಟ್ -ಪ್ರಥಮ,  ಸಂಸ್ಕೃತ ಭಾಷಣ- ಪ್ರಥಮ್ ಜಿ., ಪ್ರಥಮ, ಭಾವಗೀತೆ- ಜಯಶ್ರೀ ಪ್ರಥಮ.

ಅರೇಬಿಕ್ ಧಾರ್ಮಿಕ ಪಠಣ – ಮಸೀಹಾ – ದ್ವಿತೀಯ,  ರಂಗೋಲಿ – ಭೂಮಿಕಾ – ದ್ವಿತೀಯ, ಸಂಸ್ಕೃತ ಧಾರ್ಮಿಕ ಪಠಣ – ಪ್ರತೀಕ್ಷಾ – ದ್ವಿತೀಯ, ಕವ್ವಾಲಿ – ಆಹಿಲ್ ಮತ್ತು ತಂಡ – ದ್ವಿತೀಯ, ಜಾನಪದ ನೃತ್ಯ – ನವ್ಯ ಮತ್ತು ತಂಡ – ದ್ವಿತೀಯ, ಚಿತ್ರಕಲೆ- ರಕ್ಷನ್ ದ್ವಿತೀಯ.ಮಿಮಿಕ್ರಿ- ಅದ್ವಿಕ್ – ತೃತೀಯ, ಕನ್ನಡ ಭಾಷಣ-ಸಿಂಚನಾ ಜಿ.ಭಟ್ ತೃತೀಯ, ಕ್ವಿಜ್ ತನ್ಮಯ್ ಮತ್ತು ಸಮೀಕ್ಷಾ -ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯ ಶಿಕ್ಷಕಿ, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ .

Exit mobile version