ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ – 66ರಲ್ಲಿನ ಕಾಮಗಾರಿ ಮತಗತು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಡಿ ಅವರು ಚರ್ಚೆ ಚರ್ಚಿಸಿದರು.
ಎನ್.ಎಚ್-66ರಲ್ಲಿರುವ ಸಮಸ್ಯೆಗಳಲ್ಲಿ ಹೊಸದಾಗಿ ಜಿಪಿಆರ್ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪಡುಬಿದ್ರೆ ಉಡುಪಿಯ ಅಂಬಾಗಿಲು ಬ್ರಹ್ಮಾವರ ಕೋಟ ಜಂಕ್ಷನ್ ತೆಕ್ಕಟ್ಟೆ ಒಟ್ಟು 4-5 ಜಂಕ್ಷನ್ಗಳಲ್ಲಿ ಮೇಲ್ ಸೇತುವೆ ಮಾಡಬೇಕಾಗಿರುವುದರಿಂದ ಹೊಸದಾಗಿ ಎರಡು ಕಂಪನಿಗಳಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಜಿಪಿಆರ್ ಮಾಡಲು ಅವಕಾಶ ಕಲ್ಪಿಸಿದ್ದು ಅದರ ಜೊತೆಯಲ್ಲಿ ಹೆಜಮಾಡಿ ಯಿ೦ದ ಕುಂದಾಪುರ ಶಾಸ್ತ್ರಿ ಸರ್ಕಲ್ ತನಕ ಸುಮಾರು 64 ಕಿಲೋಮೀಟರ್ ಸರ್ವಿಸ್ ರಸ್ತೆ ಮಾಡಬೇಕೆನ್ನುವ ಬೇಡಿಕೆ ಹಿನ್ನೆಲೆ ಅನುಗುಣವಾಗಿ ಸುಮಾರು 29 ಕಿಲೋಮೀಟರ್ ಮಂಜೂರಾಗಿ ಪ್ರಸ್ತುತ ಕಾಮಗಾರಿ ಆಗುತ್ತಿದೆ. ಇನ್ನು 25-30 ಕಿ.ಮೀ ಸರ್ವಿಸ್ ರಸ್ತೆ ಹೊಸದಾಗಿ ಪ್ರಸ್ತಾಪನೆ ಬಂದಿದೆ.
ಹೆಜಮಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಅಲ್ಲಿನ ಎರಡು ಕಡೆಯಿಂದ ಸರ್ವಿಸ್ ರಸ್ತೆ ಅಗಲೀಕರಣ ಅಗುತ್ತಿರುವದರಿಂದ ಸಮಸ್ಯೆಗಳು ಕೇಳಿ ಬರುತ್ತಿವೆ. ಈಗ ನಡೆಯುತ್ತಿರುವ ಕಾಮಗಾರಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಪರಿಶೀಲನೆ ಮಾಡಿದರು. ಸಾರ್ವಜನಿಕರ ಕೆಲವೊಂದು ಸಮಸ್ಯೆಗಳನ್ನು ಆಲಿಸಿ, ಕೆಲವು ಸಣ್ಣಪುಟ್ಟ ಅಡಚಣೆ ಇದ್ದರೂ ಕೂಡ ಸಂಚಾರ ಸುಗಮವಾಗಲು ಸಾರ್ವಜನಿಕರ ಸಹಕಾರ ಮಾಡಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಕೊಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಗಿಣಿ ದೇವಾಡಿಗ, ಬಿಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್ ಜಿ ಪೂಜಾರಿ, ಗೋಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ ಹಾಗೂ ಪ್ರಮುಖರಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ ಎಸ್. ಕೃಷ್ಣಗೊಲ್ಲ, ಸುರೇಶ್ ಕುಂದರ್, ವಿಠಲ್ ಪೂಜಾರಿ ಐರೋಡಿ, ಅಧಿಕಾರಿಗಳು, ಇಂಜಿನಿಯರ್ಗಳು ಉಪಸ್ಥಿತರಿದ್ದರು.