Site icon Kundapra.com ಕುಂದಾಪ್ರ ಡಾಟ್ ಕಾಂ

ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಕಶ್ಚಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿನಿ ಆರಾಧ್ಯ ಶೆಟ್ಟಿಗೆ ಬೆಳ್ಳಿ ಪದಕ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಅಸ್ಸಾಂನಲ್ಲಿ ನಡೆದ ನ್ಯಾಷನಲ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಇಲ್ಲಿನ ಕಶ್ಚಿ ಚೆಸ್ ಸ್ಕೂಲ್‌ನ ವಿದ್ಯಾರ್ಥಿನಿ ಆರಾಧ್ಯ ಎಸ್. ಶೆಟ್ಟಿ ಹೊಸ ದಾಖಲೆ ಬರೆದಿದ್ದಾರೆ.

ಸತತ ಒಂಬತ್ತು ಸುತ್ತುಗಳಲ್ಲಿ ಸೋಲರಿಯದೆ ಹೊಸ ವರ್ಷಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಬಿಹಾರ, ಅಸ್ಸಾಂ, ಕೇರಳ, ತೆಲಂಗಾಣ, ರಾಜಸ್ತಾನ ರಾಜ್ಯಗಳ ರೇಟಿಂಗ್ ಚೆಸ್ ಕ್ರೀಡಾಪಟುಗಳನ್ನು ಸೋಲಿಸುವುದರ ಮೂಲಕ ಬೆಳ್ಳಿ ಪದಕ ಗಳಿಸಿ ಕರ್ನಾಟಕ ರಾಜ್ಯದ ಚೆಸ್ ಕ್ರೀಡಾಪಟುಗಳಲ್ಲಿ ಭರವಸೆಯ ಧ್ರುವತಾರೆಯಾಗಿಯಾಗಿ ಮೂಡಿಬಂದಿದ್ದಾರೆ ಎಂದು ಚೆಸ್ ಸ್ಕೂಲ್‌ನ ಪ್ರಕಟಣೆ ತಿಳಿಸಿದೆ.

ಈಕೆ ತಾಲೂಕಿನ ಸಲ್ವಾಡಿಯ ಗ್ರಾಮದ ಶ್ರೀಕಾಂತ್ ಶೆಟ್ಟಿ ಹಾಗೂ ಉಷಾಲತಾ ಶೆಟ್ಟಿ  ದಂಪತಿಯ ಪುತ್ರಿ.

Exit mobile version