ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತೀಯ ಪರಂಪರೆಗಳ ಅರಿವು ನೀಡುತ್ತಾ ಬಂದ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಜರ್ಮನಿ ಮೂಲದ ಜೂಡಿತ್ ಹೆರ್ಮನ್ ತಮ್ಮ ಮಗನ ಜೊತೆಗೆ ಇತ್ತೀಚಿಗೆ ಭೇಟಿ ನೀಡಿದರು.
ಹೃಷಿಕೇಶದ ಪ್ರಸಿದ್ಧ ವೈದ್ಯರಾದ ಡಾ| ತನು ವರ್ಮ, ಮಂಗಳೂರಿನ ಶ್ರೀ ಕಿಶೋರ್ ಕೂಡ ಅವರ ಜೊತೆಗಿದ್ದರು. ಶಾಲೆಯ ಮತಂಗವನ, ಶೃಂಗವನ, ಕಣಾದವನ, ಘಟೋತ್ಕಚ, ವ್ಯಾಯಾಮಸ್ಥಳ, ಶಿಬಿವನ, ತರಗತಿ, ವಸತಿ ನಿಲಯವೇ ಮೊದಲಾದ ಪ್ರದೇಶಗಳಿಗೆ ಹೋಗಿ ಮಾಹಿತಿಗಳನ್ನು ಪಡೆದುಕೊಂಡರು. ಅಧ್ಯಯನ, ಅಧ್ಯಾಪನದ ಕ್ರಮಗಳ ಬಗ್ಗೆ ಮಾಹಿತಿಗಳನ್ನು ತಿಳಿದುಕೊಂಡು ಸಂತಸವನ್ನು ವ್ಯಕ್ತಪಡಿಸಿ ಮಾತನಾಡುತ್ತಾ ಜರ್ಮನಿ ಮತ್ತು ಭಾರತದ ನಡುವಿನ ಭಿನ್ನತೆಯ ಜೊತೆಗೆ ಸಾಮಾನ್ಯ ಅಂಶಗಳನ್ನು ಮಗನಾದ ಆಲ್ಬರ್ಟೊ ಡೆಸ್ಕಾನಿಯೋವಿಗೆ ಪರಿಚಯಿಸಲು ಭಾರತದ ಬೇರೆ ಬೇರೆ ಸ್ಥಳಗಳನ್ನು ಪ್ರವಾಸ ಮಾಡುತ್ತಿದ್ದೇವೆ. ಇದರಿಂದ ಜಗತ್ತನ್ನು, ಜನರನ್ನು ಹಾಗೂ ಶಾಲೆಗಳ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಮ್., ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ-ಶಿಕ್ಷಕೇತರವೃಂದ ಮತ್ತು ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ, ಮಾಹಿತಿಯನ್ನು ಸ್ವೀಕರಿಸಿದರು.

