ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಟವಾಡಲು ತೆರಳಿದ್ದ ಬಾಲಕ ಮನೆಗೆ ಹಿಂದಿರುಗದೇ ನಾಪತ್ತೆಯಾಗಿದ್ದ ಘಟನೆ ಬುಧವಾರ ಸಂಜೆ ನಡೆದಿದ್ದು, ವಿಚಾರ ಗಮನಕ್ಕೆ ಬರುತ್ತಿದ್ದಂತೆ ಗಂಗೊಳ್ಳಿ ಪಿಎಸ್‌ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ಕ್ಷೀಪ್ರ ಕಾರ್ಯಾಚರಣೆ ನಡೆಸಿ ಬಾಲಕನ್ನು ಪತ್ತೆ ಮಾಡಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಆಗಿದ್ದಿಷ್ಟು:
ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ 10 ವರ್ಷದ ಬಾಲಕನೋರ್ವ ಶಾಲೆ ಮಗಿಸಿ ಮನೆಗೆ ಹಿಂದಿರುಗಿದ್ದ. ಅಲ್ಲಿಂದ ಬೆಣ್ಗೇರೆ ನಾಗ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ಆಡವಾಡಲು ತೆರಳಿದ್ದ. ಸಂಜೆ 06:30ರ ತನಕವೂ ಬಾಲಕ ಅದೇ ಪರಿಸರದಲ್ಲಿ ಆಟವಾಡುತ್ತಿರುವುದನ್ನು ಆತನ ಪಕ್ಕದ ಮನೆಯವರೂ ಗಮನಿಸಿದ್ದರು. ಆದರೆ ರಾತ್ರಿ 07:00 ಗಂಟೆ ಆದರೂ ಆತ ಮನೆಗೆ ಹಿಂದಿರುಗದೇ ಇರುವುದನ್ನು ಗಮನಿಸಿದ ಬಾಲಕನ ಮಾವ ಪಕ್ಕದ ಮನೆ ಹಾಗೂ ಸುತ್ತಮುತ್ತಲು ವಿಚಾರಿಸಿದ್ದಾರೆ. ಎಲ್ಲಿಯೂ ಬಾಲಕನ ಸುಳಿವು ಸಿಗದಿದ್ದಾಗ ಊರವರು ಸೇರಿ ಹುಡುಕಾಟ ನಡೆಸಿದ್ದಾರೆ. ಬಾಲಕ ಆಡವಾಡುತ್ತಿದ್ದ ಸುತ್ತಲಿನ ಪರಿಸರದಲ್ಲಿ ನೂರಾರು ಮಂದಿ ಸ್ಥಳೀಯರು ಜಮಾಯಿಸಿ ಹುಡುಕಾಟ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ.

ಘಟನೆಯ ಬಗ್ಗೆ ಮಾಹಿತಿ ಪಡೆದ ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪವನ್ ನಾಯಕ್ ಹಾಗೂ ಅವರ ತಂಡ ರಾತ್ರಿ ಮತ್ತೆ ಹುಡುಕಾಟ ಮುಂದುವರಿಸಿದರು. ಪವನ್ ನಾಯಕ್ ಅವರು ಬಾಲಕನ ಮನೆಯಿಂದ ಸುಮಾರು 250 ಮೀಟರ್ ದೂರದಲ್ಲಿರುವ ಬಂಡೆ ಕಲ್ಲಿನ ಕೆಳಗಡೆ ಪೊಟರೆಯಲ್ಲಿ ಮಲಗಿಕೊಂಡಿದ್ದ ಬಾಲಕನನ್ನು ಪತ್ತೆ ಹಚ್ಚಿ , ತಕ್ಷಣ ಆತನನ್ನು ರಕ್ಷಸಿ ಕುಟುಂಬಿಕರಿಗೆ ಹಸ್ತಾಂತರಿಸಿದ್ದಾರೆ. ಪೊಲೀಸರ ಕ್ಷೀಪ್ರ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಾಲಕನ ತಂದೆ ತಾಯಿ ಮೃತರಾಗಿದ್ದ ಸಂಬಂಧಿಕರು ಪಾಲನೆ ಮಾಡುತ್ತಿದ್ದಾರೆ. ಆಡವಾಡುತ್ತಿದ್ದ ಸಂದರ್ಭ ಚಿಕ್ಕ ಗಾಯವಾಗಿದ್ದು ಮನೆಯಲ್ಲಿ ಬೈಯಬಹುದು ಎಂಬ ಕಾರಣಕ್ಕೆ ಹೆದರಿ ಅಡಗಿ ಕುಳಿತಿದ್ದ ಎನ್ನಲಾಗಿದೆ. ಬುಧವಾರ ಸಂಜೆ ಗುಜ್ಜಾಡಿ ಪರಿಸರದಲ್ಲಿ ಕೆಲ ಗಂಟೆಗಳ ಕಾಲ ಆತಂಕ ಸೃಷ್ಟಿಸಿದ್ದ ಪ್ರಕರಣ ಸುಖಾಂತ್ಯ ಕಂಡಂತಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಪವನ್ ನಾಯಕ್ ರವರು ಹೆಚ್ ಡಿ ಕುಲಕರ್ಣಿ, ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ ಹಾಗೂ ಶಿವಕುಮಾರ್ ಬಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರುರವರ ನಿರ್ದೇಶನದಂತೆ ಪವನ್ ನಾಯಕ್ (ಕಾ & ಸು), ಸುದರ್ಶನ್ ಬಿ ಎನ್ (ತನಿಖೆ) ಹಾಗೂ ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ರಾಘವೇಂದ್ರ ಶೆಟ್ಟಿ, ಚಂದ್ರ ಪಿ, ರಾಘವೇಂದ್ರ ಪೂಜಾರಿ, ಸಂದೀಪ್ ಕುರಾಣಿ, ರಿತೇಶ್ ಶೆಟ್ಟಿ, ಮಾಳಿಂಗರಾಯ, ನಿತೀನ್, ಶರಣಪ್ಪ, ಮಲ್ಲಪ್ಪ, ಮಾರುತಿ ನಾಯ್ಕ, ರವಿಚಂದ್ರ ಅವರು