Site icon Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ: ಜನವರಿ 25 ರಿಂದ 27ರ ವರೆಗೆ ಫಲಪುಷ್ಪ ಪ್ರದರ್ಶನ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ
: ತೋಟಗಾರಿಕಾ ಇಲಾಖೆ ವತಿಯಿಂದ ಗಣರಾಜ್ಯೋತ್ಸವ ಪ್ರಯುಕ್ತ ಜನವರಿ 25ರಿಂದ 27 ರವರೆಗೆ ರೈತ ಸೇವಾ ಕೇಂದ್ರ ಶಿವಳ್ಳಿ ತೋಟಗಾರಿಕಾ ಕ್ಷೇತ್ರ, ದೊಡ್ಡಣ್ಣ ಗುಡ್ಡೆಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಸದರಿ ಫಲಪುಷ್ಪ ಪ್ರದರ್ಶನದಲ್ಲಿ ತೋಟಗಾರಿಕೆ ಚಟುವಟಿಕೆ ಹೊಂದಿರುವವರಿಗೆ ಹಾಗೂ ಸಾವಯವ ಉತ್ಪನ್ನಗಳ ಮಳಿಗೆದಾರರಿಗೆ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ದಿಮೆದಾರರು, ಯಂತ್ರೋಪಕರಣಗಳ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗೆ 3500 ರೂ.ದರ ನಿಗದಿ ಪಡಿಸಲಾಗಿದೆ.

ಮಳಿಗೆ ತೆರೆಯಲು ಬಯಸುವ ಆಸಕ್ತರು ಮಳಿಗೆಗಳ ಮೊತ್ತವನ್ನು ಆನ್ ಲೈನ್ ಕ್ಯೂ.ಆರ್ ಕೋಡ್ ಮೂಲಕವೇ ರೈತ ಸೇವಾ ಕೇಂದ್ರದ ಖಾತೆಗೆ ಜನವರಿ 20 ರ ಒಳಗಾಗಿ ಪಾವತಿಸಬಹುದಾಗಿದೆ. ಹೆಸರು ನೋಂದಾಯಿಸಲು ಇಚ್ಛಿಸುವವರು ಸಹಾಯಕ ತೋಟಗಾರಿಕಾ ನಿರ್ದೇಶಕರ ದೂರವಾಣಿ ಸಂಖ್ಯೆ 9741255168 ಅನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Exit mobile version