Site icon Kundapra.com ಕುಂದಾಪ್ರ ಡಾಟ್ ಕಾಂ

ಸಬ್ಲಾಡಿ ಸ್ಟೀಲ್‌ ಬ್ರಿಡ್ಜ್‌ ಸಮೀಪ ರೈಲು ಡಿಕ್ಕಿಯಾಗಿ ಯುವಕ ಸಾವು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಹಳಿ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಕೇರಳದಿಂದ ಗೋವಾ ಕಡೆಗೆ ಹೋಗುವ ದುರಂತ್ ಎಕ್ಸ್ ಪ್ರೆಸ್ ರೈಲು ಆಕಸ್ಮಿಕವಾಗಿ ಡಿಕ್ಕಿಯಾಗಿ ಸಾವನಪ್ಪಿದ ಘಟನೆ ತಾಲೂಕಿನ ಹಟ್ಟಿಯಂಗಡಿ ಗ್ರಾಮದ ಸಬ್ಲಾಡಿಯ ಸ್ಟೀಲ್‌ ಬ್ರಿಡ್ಜ್‌ ಸಮೀಪ ಗುರುವಾರದಂದು ಬೆಳಿಗ್ಗೆ ನಡೆದಿದೆ.

ಮೃತಪಟ್ಟವರು ಹಟ್ಟಿಯಂಗಡಿ ಗ್ರಾಮದ ನಿವಾಸಿ ಜನಾರ್ದನ (39) ಎಂದು ಗುರುತಿಸಲಾಗಿದೆ.

ಜನಾರ್ದನ ಅವರು ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, 10 ದಿನಗಳ ಹಿಂದೆ ಊರಿಗೆ ಬಂದಿದ್ದರು.

ಅವರ ದೊಡ್ಡಮ್ಮನ ಪುತ್ರ ಗಣೇಶ ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version