Site icon Kundapra.com ಕುಂದಾಪ್ರ ಡಾಟ್ ಕಾಂ

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್‌ ಆಚಾರ್ಯ ಅವರಿಗೆ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ನಾಡಿನ ಖ್ಯಾತ ವ್ಯಂಗ್ಯಚಿತ್ರಕಾರ ಕಲಾವಿದ ಸತೀಶ್‌ ಆಚಾರ್ಯ ಅವರು 2025ನೇ ಸಾಲಿನ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಲೆಯೊಂದಿಗಿನ ಒಡನಾಟ ಹವ್ಯಾಸವಾಗಿ, ಹವ್ಯಾಸ ವೃತ್ತಿಗೆ ತಿರುಗಿ, ಆ ಮೂಲಕ ವಿಶ್ವಖ್ಯಾತಿ ಗಳಿಸಿದ ಅಪ್ಪಟ ಕುಂದಾಪುರದ ಪ್ರತಿಭೆ ಸತೀಶ್ ಆಚಾರ್ಯ ಅವರು. ದೇಶದ ಪ್ರಮುಖ ಪತ್ರಿಕೆ ಹಾಗೂ ಪೋರ್ಟೆಲ್‌ಗಳಲ್ಲಿ ಅವರ ವ್ಯಂಗ್ಯಚಿಂತ್ರಗಳು ಪ್ರಕಟವಾಗಿರುವುದಲ್ಲದೇ, ವಿಶ್ವದಾದ್ಯಂತ ಅವರ ಕಾರ್ಟೂನುಗಳಿಗೆ ಅವರದ್ದೇ ಆದ ಅಭಿಮಾನಿ ವರ್ಗವಿದೆ. ಅವರು ಮುಂಬೈನಲ್ಲಿ ವೃತ್ತಿ ಬದುಕಿನ ರೇಸ್ ಆರಂಭಿಸಿದ್ದರು. 2015ರಲ್ಲಿ ಪೋರ್ಬ್ಸ್ ಇಂಡಿಯಾ ಗುರುತಿಸಿದ 24 ಅಗ್ರಗಣ್ಯರಲ್ಲಿ ಸತೀಶ್ ಆಚಾರ್ಯ ಓರ್ವರಾಗಿದ್ದರು.

ತಮ್ಮ ಹುಟ್ಟೂರನ್ನೇ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಮೊನಚಾದ ಹಾಗೂ ತಮ್ಮ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕ ಆಳುವ ಸರಕಾರಗಳಿಗೆ ಚಾಟಿ ಬೀಸುವ ಛಾತಿಯನ್ನು, ಪ್ರಪಂಚದ ವಾಸ್ತವಗಳನ್ನು ತೆರದಿಡುವ ದಿಟ್ಟತನವನ್ನು ಅವರು ಮುಂದುವರಿಸಿದ್ದಾರೆ. ಕುಂದಾಪುರದಲ್ಲಿ ಸತೀಶ್‌ ಅವರ ನೇತೃತ್ವದಲ್ಲಿ ಕೆಲ ವರ್ಷಗಳಿಂದ ಕಾರ್ಟೂನು ಹಬ್ಬ ನಡೆಯುತ್ತಿದ್ದು, ಯುವ ಕಲಾವಿದರು ಹಾಗೂ ಕಾರ್ಟೂನಿಷ್ಟರಿಗೆ ವೇದಿಕೆ ಓದಗಿಸಿದೆ.

ಇದನ್ನೂ ಓದಿ
► ಪತ್ರಕರ್ತ ಸೋಮಶೇಖರ ಪಡುಕೆರೆ ಅವರಿಗೆ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ – https://kundapraa.com/?p=94762 .

Exit mobile version