ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದ ಸಾಯಿರಾಜ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ನೀಡಿದ್ದಾರೆ.
‘ರೋಲ್ ಆಫ್ ಕಮ್ಯುನಿಕೇಷನ್ ಇನ್ ಎನ್ಹ್ಯಾನ್ಸಿಂಗ್ ಎನ್ವಿರಾನ್ಮೆಂಟಲ್ ಲಿಟರೆಸಿ: ಎನ್ ಎಸ್ಪ್ಲೋರಟೋರಿ ಸ್ಟಡಿ ಇನ್ ಕರ್ನಾಟಕ’ ಎಂಬ ವಿಷಯದಲ್ಲಿ ಮಂಡಿಸಿದ ಪ್ರಭಂದಕ್ಕೆ ಈ ಪದವಿ ಲಭಿಸಿದೆ.
ಅವರು ಉ.ಜಿ.ಸಿ.ಜೆ ಆರ್ ಎಫ್ ಸ್ಕಾಲರ್ಷಿಪ್‌ಗೆ ಭಾಜನರಾಗಿದ್ದರು. ಅವರಿಗೆ ವಿದ್ಯುನ್ಮಾನ ಮಾಧ್ಯಮ ವಿಭಾಗದ ಪ್ರಾಧ್ಯಾಪಕರಾದ ವಾಹಿನಿ ಅರವಿಂದ್ ಅವರು ಮಾರ್ಗದರ್ಶನ ಮಾಡಿದ್ದರು.

