ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಈ ವರ್ಷ ಬೈಂದೂರು ವಿಧಾನಸಭಾ ಕ್ಷೇತ್ರದ 43 ಪಂಚಾಯತ್‌ಗಳಲ್ಲಿ ಗ್ರಾಮೋತ್ಸವ ನಡೆಯುತ್ತಿದ್ದು, ಈ ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜನರಿಗೆ ಸರಕಾರದ ಸೌಲಭ್ಯ ದೊರಕಿಸಿಕೊಡುವ ಪ್ರಯತ್ನ ಮಾದರಿಯಾಗಿದೆ. ಗ್ರಾಮೋತ್ಸವ ಕಲ್ಪನೆ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಗ್ರಾಮದ ಜನರಿಗೆ ಸೇವೆ ನೀಡುವ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಅವರು ಗ್ರಾಮ ಪಂಚಾಯತ್ ಗುಜ್ಜಾಡಿ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನಾ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟ ಗುಜ್ಜಾಡಿ ಸಹಭಾಗಿತ್ವದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯ ಬೈಂದೂರು ಉತ್ಸವ-2026ರ ಅಂಗವಾಗಿ ಗುಜ್ಜಾಡಿ ಗ್ರಾಮ ಪಂಚಾಯತ್ ವಠಾರದಲ್ಲಿ ಮಂಗಳವಾರ ನಡೆದ ಗುಜ್ಜಾಡಿ ಗ್ರಾಮೋತ್ಸವ-2026 ಉದ್ಘಾಟಿಸಿ ಮಾತನಾಡಿದರು.

ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ದಾನಿಗಳಾದ ಚಂದ್ರ ನಾಯ್ಕ್ ಕೊಡಪಾಡಿ, ಸುರೇಂದ್ರ ನಾವಡ ಮಂಕಿ ಹಾಗೂ ಉಮೇಶ ಎಲ್. ಮೇಸ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಉಪಾಧ್ಯಕ್ಷೆ ಜಲಜಾ ಮೊಗವೀರ, ಸದಸ್ಯರಾದ ಹರೀಶ ಮೇಸ್ತ, ರಾಜು ಪೂಜಾರಿ, ಜನಾರ್ದನ ಪೂಜಾರಿ, ಭಾರತಿ, ಯಮುನಾ ಪೂಜಾರಿ, ಲೋಲಾಕ್ಷಿ ಪಂಡಿತ್, ಜೆಸಿಂತಾ ಡಿಅಲ್ಮೇಡಾ, ತುಂಗಾ ಪೂಜಾರಿ, ನಾಯಕವಾಡಿ ಶ್ರೀ ನಾರಾಯಯಣಗುರು ಮಂದಿರದ ಕಾರ್ಯದರ್ಶಿ ಶಂಕರ ಪೂಜಾರಿ, ನಾಯಕವಾಡಿ ಶ್ರೀ ಸಂಗಮೇಶ್ವರ ದೇವಸ್ಥಾನದ ಅಧ್ಯಕ್ಷ ರಘುರಾಮ, ಬೆಣ್ಗೇರೆ ಶ್ರೀ ನಾಗ ದೇವಸ್ಥಾನದ ಅಧ್ಯಕ್ಷ ಉಮೇಶ ಎಲ್. ಮೇಸ್ತ, ಬೈಂದೂರು ಉತ್ಸವ ಸಮಿತಿ ಸಂಚಾಲಕ ಗಣೇಶ ಗಾಣಿಗ, ಕಾರ್ಯದರ್ಶಿ ಅನಿತಾ ಆರ್. ಕೆ., ಸಮೃದ್ಧಿ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಅಧ್ಯಕ್ಷೆ ನಂದಿನಿ ಉಪಸ್ಥಿತರಿದ್ದರು.
ಪಿಡಿಒ ಶೋಭಾ ಸ್ವಾಗತಿಸಿದರು. ಸುಂದರ ಜಿ. ಕಾರ್ಯಕ್ರಮ ನಿರ್ವಹಿಸಿದರು.