Kundapra.com ಕುಂದಾಪ್ರ ಡಾಟ್ ಕಾಂ

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ನಬಾರ್ಡ್‌ನ ಡಿಡಿಎಮ್‌ ಸಂಗೀತಾ ಕರ್ತ ಭೇಟಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೈಂದೂರು:
ತಾಲೂಕಿನ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿ ಉಪ್ಪುಂದ ಇಲ್ಲಿಗೆ ನಬಾರ್ಡ್‌ನ ಡಿಡಿಎಮ್‌ ಸಂಗೀತಾ ಕರ್ತಾ ಭೇಟಿ ನೀಡಿ ಕೃಷಿ ಸಾಲದ ದಾಖಲೆಗಳನ್ನು ಹಾಗೂ ಪ್ರಗತಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಅವರನ್ನು ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಗೌರವಿಸಿದರು. ಸಹಕಾರ ಸಂಘಗಳ ವಲಯ ಮೇಲ್ವಿಚಾರಕರಾದ ಶಿವರಾಮ ಪೂಜಾರಿ, ಸಂದೀಪ ಶೆಟ್ಟಿ , ಸಂಘದ ಸಿಇಓ ವಿಷ್ಣು ಪೈ, ಮಾರಾಟಾಧಿಕಾರಿ ಚಂದಯ್ಯ ಶೆಟ್ಟಿ ಉಪಸ್ಥಿತರಿದ್ದರು.

Exit mobile version