ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸ್ವ-ಉದ್ಯೋಗವು ಪ್ರತಿಯೊಬ್ಬರಿಗೂ ಆಧಾರವಾಗುತ್ತದೆ. ಮಹಿಳೆಯರು ಸಣ್ಣ ಸಣ್ಣ ಉದ್ಯೋಗ ಮಾಡಿ ಆರ್ಥಿಕತೆಯನ್ನು ಹೆಚ್ಚಿಸಕೊಳ್ಳಬಹುದು. ಹೊಲಿಗೆ ವೃತ್ತಿ ನಿರಂತರ ಬೇಡಿಕೆ ಇದೆ. ಮನೆಯಲ್ಲಿ ಕುಳಿತು ಕೆಲಸ ಮಾಡಬಹುದು. ಸಮಾಜದ ಪ್ರತಿಯೊಬ್ಬರು ಗಾಣಿಗ ಟ್ರಸ್ಟ್ ಮಾಡುವ ತರಬೇತಿ ಪಡೆದುಕೊಳ್ಳಬೇಕು ಎಂದು ಬೈಂದೂರು ಗಾಣಿಗ ಪ್ರತಿಷ್ಠಾನದ ಅಧ್ಯಕ್ಷರಾದ ಕೊಲ್ಲೂರು ರಮೇಶ್ ಗಾಣಿಗ ಹೇಳಿದರು.
ಅವರು ಬೈಂದೂರಿನಲ್ಲಿ ಗಾಣಿಗ ಪ್ರತಿಷ್ಠಾನ ನಡೆಸುವ ಹೊಲಿಗೆ ತರಬೇತಿಯ 4ನೇ ತಂಡದ ಮಹಿಳೆಯರಿಗೆ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಆನಂದ ಗಾಣಿಗ, ನಾಗರಾಜ ಗಾಣಿಗ, ಪ್ರೇಮಾ ಶೆಟ್ಟಿ, ಬಾಬು ಗಾಣಿಗ, ರಾಜು ಹಳವಾಡಿ, ಶಿವಾನಂದ ಗಾಣಿಗ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತರಬೇತುದಾರ ಸುಬ್ಬಣ್ಣ ಗಾಣಿಗ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಕಾರ್ಯದರ್ಶಿ ನಾಗರಾಜ ಗಾಣಿಗ ಸ್ವಾಗತಿಸಿ, ಸಂಚಾಲಕ ಶಿವಾನಂದ ಗಾಣಿಗ ವಂದಿಸಿದರು.