ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಮೆಟ್ಟಿನಹೊಳೆ ಶ್ರೀ ಜೈನಜಟ್ಟಿಗೆಶ್ವರ ಸಪರಿವಾರ ದೈವಗಳ ವಾರ್ಷಿಕ ಜಾತ್ರಾ ಮಹೋತ್ಸವವು ಇತ್ತೀಚಿಗೆ ಅದ್ದೂರಿಯಾಗಿ ಜರುಗಿತು.
ದೈವಸ್ಥಾನದ ಆವರಣದಲ್ಲಿ ನಿರ್ಮಿಸಿದ ನೂತನ ಎಎಸ್ ಶೆಟ್ಟಿ ವೇದಿಕೆಯನ್ನು ಬೈಂದೂರಿನ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಮಾಜಿ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಅವರು ಕೆರೆಯ ಆವರಣ ರಚನೆಯನ್ನು ಉದ್ಘಾಟಿಸಿದರು. ಪ್ರಥಮ ದರ್ಜೆ ಗುತ್ತಿಗೆದಾರರಾದ ಅಶೋಕ್ ಶೆಟ್ಟಿ ಹುಬ್ಬಳ್ಳಿ ಅವರು ಆವರಣ ಗೋಡೆಯನ್ನು ಉದ್ಘಾಟಿಸಿದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ನೆಲ್ಯಾಡಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರದ ಪ್ರಧಾನ ಪೋಷಕರುಗಳಾದ ಶ್ವೇತಾ ಅಶೋಕ್ ಶೆಟ್ಟಿ, ಸುಶೀಲ ಸುನಿಲ್ ಶೆಟ್ಟಿ ನೆಲ್ಯಾಡಿ, ಗೀತಾ ವಿ. ಶೆಟ್ಟಿ ಕರ್ಕಿ, ಪೂರ್ಣಿಮಾ ಪಿ. ಶೆಟ್ಟಿ ನೆಲ್ಯಾಡಿ, ನಾಗರಾಜ ದೇವಾಡಿಗ ಮಿಯ್ಯಾಣಿ ಮೊದಲಾದ ದಾನಿಗಳನ್ನು ಸನ್ಮಾನಿಸಲಾಯಿತು.

ವಿಜಯ ಬ್ಯಾಂಕ್ ನಿವೃತ್ತ ಡಿಜಿಎಂ ಆನಂದ ಶೆಟ್ಟಿ ಅಲ್ಸಾಡಿ, ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ, ಕರ್ಕಿ ಹಾಗೂ ಡಾ. ಶಿವರಾಮ ಕಾರಂತ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೀವ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮರಾಜ ಜೈನ್ ಬೋಳಂಬಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಿಕ್ಕಯ್ಯ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಶಾರದಾ, ಶೇಖರ್ ಶೆಟ್ಟಿ, ಜಗನ್ನಾಥ್ ಕುಲಾಲ್, ಮಾಜಿ ಅಧ್ಯಕ್ಷೆ ಚಂದು ಕುಲಾಲ್, ಸ್ಥಳೀಯ ಪ್ರಮುಖರಾದ ಸೀತಾರಾಮ ಕುಲಾಲ್, ವಿಜಯ ಕುಲಾಲ್, ಬಾಬು ಕುಲಾಲ್, ನಾರಾಯಣ ಕುಲಾಲ್, ಬಾಲಕೃಷ್ಣ ಶೆಟ್ಟಿ ಕರ್ಕಿ, ಉಮೇಶ ದೇವಾಡಿಗ ಕಂಚಿಕಾನ್, ಕುಲಾಲ ವೇದಿಕೆ ಅಧ್ಯಕ್ಷ ಸುರೇಶ್ ಕುಲಾಲ , ಉದಯ ಕುಲಾಲ್, ಭೋಜರಾಜ ಕುಲಾಲ್, ಹೆಚ್. ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಅನಾರೋಗ್ಯ ಪೀಡಿತರಾದವರಿಗೆ ಸಹಾಯಧನವನ್ನು ವಿತರಿಸಲಾಯಿತು. ಶಿಕ್ಷಕರಾದ ನಾರಾಯಣ್ ರಾಜು, ಬಿ. ಆರ್ ಪಿ ಮಂಜುನಾಥ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಕುಮಾರಿ ವಿಜಯಲಕ್ಷ್ಮಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಜನತಾ ಪ್ರೌಢಶಾಲೆ ಕಿರಿ ಮಂಜೇಶ್ವರ ಇಲ್ಲಿಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಕಾರ್ಯಕ್ರಮ ಸಂಪನ್ನಗೊಂಡಿತು. ಧಾರ್ಮಿಕ ಕಾರ್ಯಕ್ರಮಗಳು ದೈವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಧರ ಜೋಯಿಸ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.