Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಮರಳಲ್ಲಿ ಅರಳಿದ ʼನಮ್ಮೂರ ಶಾಲೆʼ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಇಲ್ಲಿನ ಪಾರಿಜಾತದ ವತಿಯಿಂದ ದಿ। ರಾಮಚಂದ್ರ ಭಟ್ ಮತ್ತು ದಿ। ಅಹಲ್ಯ ಭಟ್ ಸವಿನೆನಪಿಗಾಗಿ ಕೋಡಿ ಬೀಚ್‌ನಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಆಕರ್ಷಣೀಯ ‘ನಮ್ಮೂರ ಶಾಲೆ’ ಪರಿಕಲ್ಪನೆಯ ಬೃಹತ್ ಮರಳು ಶಿಲ್ಪಾಕೃತಿ ಕಣ್ಮನ ಸೆಳೆಯುತ್ತಿದೆ.

ಸರಕಾರಿ ಶಾಲಾ ಮಕ್ಕಳ ಧೈಯವನ್ನಿಟ್ಟುಕೊಂಡು ಸ್ವಾತಂತ್ರತೆಯನ್ನು ಮತ್ತು ಬಣ್ಣದ ಕನಸ್ಸನ್ನು ಕಾಣುವ ಗಾಳಿಪಟದ ವರ್ಣನೆಯೊಂದಿಗೆ ಶಾಲಾ ದೃಶ್ಯ ಹಾಗೂ ಗಾಳಿಪಟ ಉತ್ಸವ ಎಂಬ ಬರಹದೊಂದಿಗೆ ಬಳಪವನ್ನು ಹಿಡಿದುಕೊಂಡ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯ ಭಾವನೆಯನ್ನು ಅಭಿವ್ಯಕ್ತಿಸುವ ಕಲಾಕೃತಿಯು “ಸ್ಯಾಂಡ್ ಥೀಂ” ಉಡುಪಿಯ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ರಿಂದ 15 ಅಡಿ ಅಗಲ ಮತ್ತು 6 ಅಡಿ ಎತ್ತರದಲ್ಲಿ ರಚಿಸಲಾಗಿದ್ದು, ದಿನಾಂಕ 18ರಂದು ಸಾರ್ವಜನಿಕ ವೀಕ್ಷಣೆಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

Exit mobile version