Site icon Kundapra.com ಕುಂದಾಪ್ರ ಡಾಟ್ ಕಾಂ

ಸೈಂಟ್ ಫಿಲಿಫ್ ನೆರಿ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ ಆನಗಳ್ಳಿ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಹೊಸದಾಗಿ ಕುಂದಾಪುರದಲ್ಲಿ ಪ್ರಾರಂಭವಾದ ಸೈಂಟ್ ಫಿಲಿಫ್ ನೆರಿ ಸೊಸೈಟಿ, ಇದರ ಸ್ಥಾಪಕ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ ಆನಗಳ್ಳಿ ಆಯ್ಕೆಯಾಗಿದ್ದಾರೆ.

ಸಂಸ್ಥೆಯನ್ನು ಮುಖ್ಯ ಪ್ರವರ್ತಕರಾಗಿ ಸಂಸ್ಥೆಯನ್ನು ಸಂಘಟಿಸಿದ್ದ ಅವರು ಜ.8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣೆಯನ್ನು ಸರಕಾರದ ಸಹಾಯಕ ನಿಬಂಧಕರ ಕಛೇರಿ ಕುಂದಾಪುರ ಇದರ ಅಧಿಕಾರಿಯಾದ ಎಂ.ಸಿ. ಸ್ವಾಮಿ ಅವರು ನೆರವೇರಿಸಿಕೊಟ್ಟರು. ಉಪಾಧ್ಯಕ್ಷರಾಗಿ ಅಲಿಷಾ ಡಿಸೋಜಾ ಆಯ್ಕೆಯಾದರು.

ಸ್ವ-ಉದ್ಯೋಗಿಗಳಿಗೆ ನೆರವು ನೀಡುವ ಮುಖ್ಯ ಉದ್ದೇಶವಾಗಿದ್ದು, ಸಂಘದ ಸದಸ್ಯರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಬೇಕಾದ ಆನ್ಲೈನ್ ಅರ್ಜಿ ಸಲ್ಲಿಕೆ, ಹಣಕಾಸು ನೆರವು, ಮಾಹಿತಿ ಮತ್ತು ತರಬೇತಿ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಚುನಾವಣೆ ನಡೆಸಲು ನೆರವಾದ ಎಲ್ಲಾ ನಿರ್ದೇಶಕರಿಗೆ ಮತ್ತು ಸರಕಾರದ ಅಧಿಕಾರಿಗಳಿಗೆ ಸಂಸ್ಥೆಯ ಉಪಾಧ್ಯಕ್ಷೆ ಆಲಿಷಾ ಡಿಸೋಜಾ ಧನ್ಯವಾದ ತಿಳಿಸಿದ್ದಾರೆ.

Exit mobile version