Kundapra.com ಕುಂದಾಪ್ರ ಡಾಟ್ ಕಾಂ

ಬೇಕರಿ ಉತ್ಪನ್ನಗಳ ರಫ್ತು ಸನ್ನದ್ಧತೆಗೆ ಗಂಭೀರ ಚಿಂತನೆ: ಶ್ರೀಧರ ಪಿ.ಎಸ್. ಅವರಿಂದ ವಿಷಯ ಮಂಡನೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ
: ಉತ್ತರ ಪ್ರದೇಶದ ನೊಯ್ದಾದಲ್ಲಿ ನಡೆದ ಭಾರತೀಯ ಬೇಕರಿ ಉತ್ಪನ್ನಗಳಿಗೆ ಜಾಗತಿಕ ಸ್ಪರ್ಧಾತ್ಮಕತೆ, ರಫ್ತು ಸನ್ನದ್ಧತೆ ಕುರಿತು ಸಂವಾದ ಕಾರ್ಯಕ್ರಮ (ಇಂಡಸ್‌ಫುಡ್ 2026) ದಲ್ಲಿ ಕರ್ನಾಟಕ ರಾಜ್ಯ ಸಹಕಾರ ಸಂಘಗಳ ಸಂಪನ್ಮೂಲ ವ್ಯಕ್ತಿ, ನ್ಯಾಯವಾದಿ ಶ್ರೀಧರ ಪಿ.ಎಸ್. ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಬೇಕರಿ ಉತ್ಪನ್ನಗಳ ಪ್ರಸ್ತುತ ರಫ್ತು ಸ್ಥಿತಿಗತಿ, ಕೊರತೆ, ನಿರ್ಬಂಧಗಳು, ರಫ್ತು ಹಿನ್ನಡೆಗೆ ಕಾರಣಗಳು, ಬೇಕರಿ ಉತ್ಪನ್ನಗಳ ರಫ್ತು ಅವಕಾಶ ಸದ್ಬಳಕೆಗೆ ಸಿದ್ಧತೆ, ಜಾಗತಿಕ ಸ್ಪರ್ಧಾತ್ಮಕತೆ ಮತ್ತು ನೀತಿಗಳ ಪ್ರೋತ್ಸಾಹ, ಜಾಗತಿಕ ಮಾರುಕಟ್ಟೆಯ ವಾಸ್ತವ ಕುರಿತು ಸಂವಾದ ಬೆಳಕು ಚೆಲ್ಲಿತು.

ಬೇಕರಿ ಉತ್ಪನ್ನಗಳ ರಫ್ತು ನಿಟ್ಟಿನಲ್ಲಿ ನೈಜ ಸಮಸ್ಯೆಗಳು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವಕಾಶಗಳ ಬಗ್ಗೆ ಚರ್ಚಿಸಿ ರಫ್ತು ಉತ್ತೇಜನ ನಿಟ್ಟಿನಲ್ಲಿ ದೇಶದ ನಾನಾ ರಾಜ್ಯಗಳ ಪ್ರತಿನಿಧಿಗಳು ಸಲಹೆ ನೀಡಿದರು.

ಸಂವಾದ ವಿಶಿಷ್ಟ ಅನುಭವ ನೀಡಿದೆ. ಇಂಡಸ್‌ಫುಡ್ ಪ್ರದರ್ಶನದಲ್ಲಿ 108ದೇಶಗಳ ಉದ್ಯಮಶೀಲರು ಪಾಲ್ಗೊಂಡಿದ್ದರು. ಇಂಡಸ್‌ಫುಡ್ ಜಾಗತಿಕ ಶ್ರೇಷ್ಠತೆಯ ವೇದಿಕೆಯಾಗಿದ್ದು ಐಬಿಎಫ್, ಕೆಬಿಎಸ್ಎ, ಯುಡಿಎಫ್‌ಎಂಎಸ್ಎ ನೀಡಿದ ಅವಕಾಶದಿಂದ ಬೇಕರಿ ಉತ್ಪನ್ನಗಳ ರಫ್ತು ಬಗ್ಗೆ ಗಂಭೀರ ಚಿಂತನೆ ನಡೆದಿದೆ –  ಶ್ರೀಧರ್ ಪಿ.ಎಸ್., ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್

Exit mobile version