Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ʼಅಮೃತʼ ಕೈತುತ್ತಿನ ಮಾಧುರ್ಯ ವಿಶಿಷ್ಟ ಕಾರ್ಯಕ್ರಮ

ಕುಂದಾಪ್ರ ಡಾಟ್‌ ಕಾಂ ಸುದ್ದಿ. 
ಗಂಗೊಳ್ಳಿ:
ಇಲ್ಲಿನ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ತಾಯಂದಿರು ಸ್ವಯಂ ಅಡುಗೆಯನ್ನು ತಯಾರಿಸಿ  ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಬಂದು ಕೈತುತ್ತು ನೀಡಿ ಉಣಿಸುವ “ಅಮೃತ ” ಕೈತುತ್ತಿನ ಮಾಧುರ್ಯ ಎನ್ನುವ ವಿಶಿಷ್ಟವಾದ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯನಿ ಸುಮನ ಪಡಿಯಾರ್ ಮಾತನಾಡಿ, ಶಾಲೆಗಳಲ್ಲಿ ಇಂಥ  ಕಾರ್ಯಕ್ರಮಗಳ ಮೂಲಕ  ಕೌಟುಂಬಿಕ ಮತ್ತು ಸಾಮಾಜಿಕ  ಬಾಂಧವ್ಯದ ಮೌಲ್ಯ ಮಕ್ಕಳಿಗೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.   

ಶಿಕ್ಷಕ-ರಕ್ಷಕ ಸಮಿತಿಯ ಉಪಾಧ್ಯಕ್ಷರಾಗಿರುವ ಅಜಿತ್ ಭಟ್ ಮತ್ತು  ಶಿಕ್ಷಕ-ರಕ್ಷಕ ಸಮಿತಿಯ ಕಾರ್ಯದರ್ಶಿಯಾಗಿರುವ ಅಶೋಕ್ ಎನ್‌ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಕೋಶಾಧಿಕಾರಿಯಾಗಿರುವ ಜಿ. ವೆಂಕಟೇಶ್ ನಾಯಕ್ ಪ್ರಸ್ತಾವಿಕ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ದೀಕ್ಷಿತ್ ಮೇಸ್ತ ಸ್ವಾಗತಿಸಿದರು.

ಶಿಕ್ಷಕಿಯರಾದ ಲಕ್ಷ್ಮಿ ಖಾರ್ವಿ ನಿರೂಪಿಸಿ, ರೇಖಾ ಖಾರ್ವಿ ವಂದಿಸಿದರು.

Exit mobile version