Site icon Kundapra.com ಕುಂದಾಪ್ರ ಡಾಟ್ ಕಾಂ

ನದಿ ದಂಡೆಯ ಸಂರಕ್ಷಣೆ ಮತ್ತು ತೋಡು ಬದಿಕಟ್ಟು ಕಾಮಗಾರಿ ಅನುದಾನಕ್ಕಾಗಿ ಕುಂದಾಪುರ ಶಾಸಕರಿಂದ ಸಚಿವರಿಗೆ ಮನವಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಬೆಂಗಳೂರು:
ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನದಿ ದಂಡೆಯ ಸಂರಕ್ಷಣೆ ಮತ್ತು ತೋಡು ಬದಿಕಟ್ಟು ಕಾಮಗಾರಿಗಳಿಗೆ ಅನುದಾನದ ಮಂಜೂರಾತಿಗೆ ಅದರಲ್ಲೂ ಮುಖ್ಯವಾಗಿ ಕುಂಭಾಶಿ ಪರಿಶಿಷ್ಟ ಜಾತಿಯವರ ಕಾಲೋನಿಯ ತೋಡಿನ ಬದಿಕಟ್ಟು ಕಾಮಗಾರಿಗೆ ಅನುದಾನ ಮಂಜೂರಾತಿ ಮಾಡಲು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಅವರು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವರಾದ ಎನ್.ಎಸ್ ಬೋಸರಾಜು ಅವರನ್ನು ಬೆಂಗಳೂರಿನ ಕಚೇರಿಯಲ್ಲಿ ಭೇಟಿ ಮಾಡಿ ಪ್ರಸ್ತಾವನೆ ನೀಡಿದರು.

Exit mobile version